Connect with us

Hi, what are you looking for?

Diksoochi News

ಕರಾವಳಿ

ಉಚ್ಚಿಲ: ಸ್ಥಗಿತಗೊಂಡಿದ್ದ ಉಚ್ಚಿಲ-ಮುದರಂಗಡಿ ರಸ್ತೆ ಕಾಮಗಾರಿಗೆ ಮತ್ತೆ ಚಾಲನೆ

2

ಕಾಪು : ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪುನಃ ಆರಂಭಗೊಂಡಿದೆ.

ಇತ್ತೀಚೆಗೆ ವಾಹನ ಸಂಚಾರ ಜನದಟ್ಟಣೆ ಹೆಚ್ಚುತ್ತಿದ್ದು, ಕೆಲವೊಂದು ರಸ್ತೆಗಳನ್ನು ಅನಿವಾರ್ಯವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಅಗಲೀಕರಣ ಮಾಡಲಾಗುತ್ತಿದ್ದು,ಅದರಂತೆ ಕಳೆದ ಒಂದೂವರೆ ವರ್ಷಗಳ ಹಿಂದೆ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು,ಮೋರಿ ನಿರ್ಮಿಸಿ,ರಸ್ತೆಯ ಇಕ್ಕೆಲಗಳಲ್ಲಿ ಅಗೆದು ಜಲ್ಲಿ ತುಂಬಿದ ಬಳಿಕ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ವಾಹನ ಸಂಚಾರಿಗಳು,ಪಾದಚಾರಿಗಳು ಬಹಳಷ್ಟು ಸಮಸ್ಯೆಗೊಳಗಾಗಿದ್ದರು.ಹಲವಾರು ಬಾರಿ ಈ ಬಗ್ಗೆ ಸಂಬಂಧಿತರಿಗೆ ದೂರು ನೀಡಲಾಗಿತ್ತು. ಇದೀಗ ಕಾಮಗಾರಿಗೆ ಮತ್ತೆ ಚಾಲನೆ ನೀಡುವ ಮೂಲಕ ಜನ ನಿಟ್ಟುಸಿರು ಬಿಡುವಂತಾಗಿದೆ.

ಈ ಬಗ್ಗೆ ಬೆಳಪು ಗ್ರಾ.ಪಂ ಮಾಜಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಬಹುಕಾಲದ ನಿರೀಕ್ಷೆಯ ಉಚ್ಚಿಲ-ಮುದರಂಗಡಿ ರಸ್ತೆ ಕಾಮಗಾರಿ ಮತ್ತೆ ಆರಂಭಗೊಂಡಿದೆ.ಈಗಾಗಲೇ ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್,ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ,ಪಾಲಿಟೆಕ್ನಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ಅದಕ್ಕೆ ಪೂರಕವಾಗಿ ಸಮರ್ಪಕವಾದ ರಸ್ತೆ ನಿರ್ಮಾಣಕ್ಕಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಆಡಳಿತಾವಧಿಯಲ್ಲಿ 9 ಮೀ.ರಸ್ತೆ ಅಗಲೀಕರಣಕ್ಕೆ ಸುಮಾರು 3 ಕೋಟಿ ರೂ. ಮಂಜೂರಾತಿ ಮಾಡಲಾಗಿತ್ತು.

ಇದೀಗ ಲಾಲಾಜಿ ಆರ್ ಮೆಂಡನ್ ರವರು ಶಾಸಕರಾದ ಬಳಿಕ ಮರು ಟೆಂಡರ್ ಕರೆಯಲಾಗಿದ್ದು,ರಸ್ತೆ ಅಗಲೀಕರಣದೊಂದಿಗೆ ಚರಂಡಿ, ಮೋರಿ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ತಿಗೊಳಿಸುವಂತೆ ಗುತ್ತಿದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!