ಶಿವಮೊಗ್ಗ: ತುಂಗಾ ನಾಲೆಗೆ ಕಾರು ಉರುಳಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಗಾಜನೂರು ಬಳಿ ನಡೆದಿದೆ. ಸುಷ್ಮಾ (28) ಮೃತ ದುರ್ದೈವಿ. ಮೃತ ಸುಷ್ಮಾ ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದರು
ಅನಾರೋಗ್ಯದಿಂದ ಬಳಲುತ್ತಿದ್ದಂತ ತಾಯಿಯನ್ನು ನೋಡುವ ಸಲುವಾಗಿ ಚೇತನ್, ಪತ್ನಿ ಸುಷ್ಮಾರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು.
ತುಂಗಾ ನಾಲೆಯ ಬಳಿಯಲ್ಲಿ ಕಾರಿಗೆ ಅಡ್ಡಬಂದಂತ ಹಾವನ್ನು ತಪ್ಪಿಸುವುದಕ್ಕೆ ಹೋಗಿ, ನಾಲೆಗೆ ಕಾರು ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಪತ್ನಿ ಜಲಸಮಾಧಿಯಾಗಿದ್ದಾರೆ.
Advertisement. Scroll to continue reading.

ಡ್ರೈವಿಂಗ್ ಮಾಡುತ್ತಿದ್ದಂತ ಚೇತನ್ ಕಾರಿನ ಮೇಲೆ ಏರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ಘಂಟೆ ಬಳಿಕ ಸ್ಥಳೀಯರ ಸಹಾಯದಿಂದ ಪತಿ ಚೇತನ್ ನೀರಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.