ಉಡುಪಿ : ನೃತ್ಯನಿಕೇತನ ಕೊಡವೂರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್, ಮತ್ತು ರಜತೋತ್ಸವ ಸಮಿತಿ ಬ್ರಾಹ್ಮಣ ಮಹಾಸಭಾ ಕೊಡವೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಶ್ರೀಪಾದ ಭಟ್ ನಿರ್ದೇಶನದ, ಸುಧಾ ಆಡುಕಳ ರಚನೆಯ, ಕೈವಲ್ಯ ಕಲಾ ಕೇಂದ್ರದ ಕಲಾವಿದರಾದ ದಿವ್ಯಶ್ರೀ ಕೆ ಮತ್ತು ಶರತ್ ಬೋಪಣ್ಣ ಅಭಿನಯದ ನಾಟಕ “ಮಾಧವಿ” ಕೊಡವೂರಿನ ವಿಪ್ರಶ್ರೀ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತ್ಯ ವಿಮರ್ಶಕ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡ್ಕ ನೆರವೇರಿಸಿದರು.

ವೇದಿಕೆಯಲ್ಲಿ ನಾರಾಯಣ ಬಲ್ಲಾಳ್, ಮಂಜುನಾಥ ಭಟ್, ಚಂದ್ರಶೇಖರ್ ರಾವ್, ಸಾಧು ಸಾಲಿಯಾನ್, ಸುಧಾ ಆಡುಕಳ, ನಟರಾದ ದಿವ್ಯಶ್ರೀ ಮತ್ತು ಶರತ್ ಬೋಪಣ್ಣ,ಗಣೇಶ್, ಸುಧೀರ್ ರಾವ್ ಕೊಡವೂರು, ಮಾನಸಿ ಸುಧೀರ್ ಉಪಸ್ಥಿತರಿದ್ದರು.

ವಿದ್ವಾನ್ ಸುಧೀರ್ ರಾವ್ ಕೊಡವೂರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

In this article:Diksoochi news, diksoochi Tv, diksoochi udupi, kodavooru nrithyanikethana
Click to comment

































