ನವದೆಹಲಿ: ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದ ಪ್ರವೀಣ್ ಕುಮಾರ್ ಸೋಬ್ತಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಪ್ರವೀಣ್ ಕುಮಾರ್ ಪಂಜಾಬ್ ಮೂಲದವರು.
ಮಹಾಭಾರತ ಸರಣಿಯಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದ್ದರು. ಈ ಮೂಲಕ ಮನೆ ಮಾತಾಗಿದ್ದು. ಹಲವು ಚಲನಚಿತ್ರಗಳಲ್ಲಿ ಪಾತ್ರರಾಗಿದ್ದಾರೆ.
ಅವರ ಕೊನೆಯ ಚಿತ್ರ ‘ಮಹಾಭಾರತ್ ಔರ್ ಬಾರ್ಬರಿಕ್’ 2013 ರಲ್ಲಿ ಬಿಡುಗಡೆಯಾಯಿತು. ಅವರು ಚಿತ್ರದಲ್ಲಿ ಭೀಮನ ಪಾತ್ರವನ್ನು ಮಾಡಿದ್ದಾರೆ.

ನಟ ಮಾತ್ರವಲ್ಲ ಉತ್ತಮ ಅಥ್ಲೀಟ್ ಕೂಡಾ:
ಕೇವಲ ನಟ ಮಾತ್ರವಲ್ಲದೆ, ಅವರು ಅಥ್ಲೀಟ್ ಕೂಡಾ ಆಗಿದ್ದರು. ಹ್ಯಾಮರ್ ಮತ್ತು ಡಿಸ್ಕ್ ಥ್ರೋನಲ್ಲಿ ಅಗ್ರ ಆಟಗಾರರಾಗಿದ್ದರು. ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿದ್ದರು ಮತ್ತು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.
ಬಿಎಸ್‌ಎಫ್‌ನಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸೋಬ್ತಿ ಅವರು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅವರು ಹಾಂಗ್ ಕಾಂಗ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು ಹಾಗೂ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ದೇಶವನ್ನು ಪ್ರತಿನಿಧಿಸಿದ್ದರು.
ರಾಜಕೀಯ ಪ್ರವೇಶ

2013 ರಲ್ಲಿ ಪ್ರವೀಣ್ ಕುಮಾರ್ ಸೋಬ್ತಿ ರಾಜಕೀಯಕ್ಕೆ ಸೇರಿದರು. ಅವರು ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ದೆಹಲಿಯ ವಜೀರ್‌ಪುರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಇದಾದ ಬಳಿಕ ಆಪ್ ತೊರೆದು ಬಿಜೆಪಿ ಸೇರಿದ್ದರು.
