ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿತ್ತು. ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ.
2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ 16-04-2022 ರಿಂದ ದಿನಾಂಕ 06-05-2022ರ ವರೆಗೆ ಪರೀಕ್ಷೆ ನಡೆಯಲಿವೆ.
ಅಂತಿಮ ವೇಳಾಪಟ್ಟಿ:
Advertisement. Scroll to continue reading.

- ದಿನಾಂಕ 16-04-2022ರ ಶನಿವಾರ – ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
- ದಿನಾಂಕ 18-04-2022ರ ಸೋಮವಾರ – ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
- ದಿನಾಂಕ 19-04-2022ರ ಮಂಗಳವಾರ – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
- ದಿನಾಂಕ 20-04-2022ರ ಬುಧವಾರ – ಇತಿಹಾಸ, ಭೌತಶಾಸ್ತ್ರ
- ದಿನಾಂಕ 21-04-2022ರ ಗುರುವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್
- ದಿನಾಂಕ 22-04-2022ರ ಶುಕ್ರವಾರ – ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
- ದಿನಾಂಕ 23-04-2022ರ ಶನಿವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನ: ಶಾಸ್ತ್ರ, ರಾಸಾಯನ ಶಾಸ್ತ್ರ
- ದಿನಾಂಕ 25-04-2022ರ ಸೋಮವಾರ – ಅರ್ಥ ಶಾಸ್ತ್ರ
- ದಿನಾಂಕ 26-04-2022ರ ಮಂಗಳವಾರ – ಹಿಂದಿ
- ದಿನಾಂಕ 27-04-202ರಂದು ಬುಧವಾರ ಪರೀಕ್ಷೆ ಇಲ್ಲ
- ದಿನಾಂಕ 28-04-2022ರ ಗುರುವಾರ – ಕನ್ನಡ
- ದಿನಾಂಕ 30-04-2022ರ ಶನಿವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
- ದಿನಾಂಕ 02-05-2022ರ ಸೋಮವಾರ – ಭೂಗೋಳ ಶಾಸ್ತ್ರ, ಜೇವಶಾಸ್ತ್ರ
- ದಿನಾಂಕ 04-05-2022ರ ಬುಧವಾರ – ಇಂಗ್ಲೀಷ್
- ದಿನಾಂಕ 06-05-2022ರ ಶುಕ್ರವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
In this article:Diksoochi news, diksoochi Tv, diksoochi udupi, karnataka pu board, PUC exam

Click to comment