ವರದಿ : ದಿನೇಶ್ ರಾಯಪ್ಪನಮಠ
ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಉಡುಪಿ ತಾಲೂಕು ಪೆರ್ಡೂರು ವಲಯ ಬೈರಂಪಳಿ ಸಾಮಾನ್ಯ ಸೇವಾ ಕೇಂದ್ರವನ್ನು ಬೈರಂಪಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯನಂದ ಹೆಗ್ಗಡೆ ಉದ್ಘಾಟಿಸಿದರು.
ಮೇಲ್ವಿಚಾರಕ ಸುಧೀರ್ ಹಂಗಳೂರು ಮಾತನಾಡಿ, ಸರ್ಕಾರದ 700 ವಿವಿಧ ರೀತಿಯ ಸೇವೆಗಳು ಮತ್ತು ಸೌಲಭ್ಯಗಳು ಸಾಮಾನ್ಯ ಸೇವಾ ಕೇಂದ್ರದಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ ಶ್ರಮ್ ಕಾರ್ಡ್ ನೊಂದಾವಣೆ ಮಾಡಿಕೊಡಲಾಗುತ್ತಿದೆ ಸ್ಥಳೀಯ ಅಸಂಘಟಿತ ಕಾರ್ಮಿಕರೆಲ್ಲರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಸಚೇತ ರಾವ್, ನಿವೃತ್ತ ಅಧ್ಯಾಪಕರ ನಂದಕುಮಾರ್, ಒಕ್ಕೂಟದ ಅಧ್ಯಕ್ಷೆ ಗೀತಾ, ಶಿವರಾಮ ಶೆಟ್ಟಿ, ಕಟ್ಟಡದ ಮಾಲಕ ಪುಷ್ಪ, ಒಕ್ಕೂಟದ ಪದಾಧಿಕಾರಿಗಳು, ಸಿ ಎಸ್ ಸಿ ಸಿಬ್ಬಂದಿ ಉಷಾ ಉಪಸ್ಥಿತರಿದ್ದರು.
ಬೈರಂಪಳಿ ಒಕ್ಕೂಟದ ಸೇವಾಪ್ರತಿನಿಧಿ ರಮೇಶ್ ನಾಯ್ಕ ಸ್ವಾಗತಿಸಿದರು. ಬೈರಂಪಳಿ ಒಕ್ಕೂಟದ ಸೇವಾ ಪ್ರತಿನಿಧಿ ಕು. ನಿಶಾ ವಂದನಾರ್ಪಣೆ ಮಾಡಿದರು.


































