ವರದಿ : ದಿನೇಶ್ ರಾಯಪ್ಪನಮಠ
ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ ಸಿ) ಟ್ರಸ್ಟ್ ಉಡುಪಿ ತಾಲೂಕಿನ ಪೆರ್ಡೂರು ವಲಯದ ಬೆಳ್ಳಂಪಳ್ಳಿ ಕಾರ್ಯಕ್ಷೇತ್ರದಲ್ಲಿ ಸಾಮಾನ್ಯ ಸೇವಾ ಕೇಂದ್ರ ವನ್ನು ಉದ್ಘಾಟನೆ ಮಾಡಲಾಯಿತು.
ದೀಪ ಬೆಳಗಿಸುವುದರ ಮೂಲಕ ಪ್ರಗತಿಪರ ಕೃಷಿಕ ಗೋವಿಂದರಾಜ್ ಹೆಗಡೆ ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ಸೇವಾ ಕೇಂದ್ರವನ್ನು ತೆರೆಯುವುದರಿಂದ ಎಲ್ಲಾ ಫಲಾನುಭವಿಗಳಿಗೆ ಅತ್ಯಂತ ಸುಲಭ ರೀತಿಯಲ್ಲಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಲಯದ ಮೇಲ್ವಿಚಾರಕ ಸುಧೀರ್ ಹಂಗಳೂರು, ಸಾಮಾನ್ಯ ಸೇವಾ ಕೇಂದ್ರದಲ್ಲಿ ಇರುವ ವಿವಿಧ ರೀತಿಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಪುರುಷೋತ್ತಮ್ ಪ್ರಭು, ಗಣಪತಿ ಪ್ರಭು,
ಕೇಂದ್ರ ಸಮಿತಿ ಅಧ್ಯಕ್ಷೆ ಶಮಿತಾ ಪಿ. ಶೆಟ್ಟಿ, ಸೇವಾ ಪ್ರತಿನಿಧಿ ಸುಧಾಕರ್ ನಾಯ್ಕ, ಸಿ ಎಸ್ ಸಿ ಕೇಂದ್ರ ಸಹಾಯಕಿ ಶ್ರೀರಕ್ಷಾ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಸುಧಾಕರ್ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅನಿತಾ ವಂದಿಸಿದರು.


































