ಬ್ರಹ್ಮಾವರ : ಕರ್ಜೆ ಗ್ರಾಮ ಪಂಚಾಯತಿ ಸದಸ್ಯ ದಿವಂಗತ ಮೈರ್ಮಾಡಿ ಅನಿಲ್ ಕುಮಾರ್ ಶೆಟ್ಟಿ ಸ್ಮರಣಾರ್ಥ ಅವರ ನೆನಪಿಗಾಗಿ ಅವರ ಕುಟುಂಬಿಕರು ಕರ್ಜೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ರಚಿಸಿ ಬುಧವಾರ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿದರು.
ಮೃತರ ತಂದೆ ಶಿವರಾಮ ಶೆಟ್ಟಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ಬಳಿಕ ಗ್ರಾಮ ಪಂಚಾಯತಿ ಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮಾತನಾಡಿ, ಅನಿಲ್ ಕುಮಾರ್ ಶೆಟ್ಟಿ ಅಜಾತ ಶತ್ರುವಾಗಿದ್ದರು. ಗ್ರಾಮದ ಬಹತೇಕ ಜನರಿಗೆ ಅವರು ಸಹಾಯ ಹಸ್ತ ನೀಡುತ್ತಿದ್ದರು ಗ್ರಾಮದ ಜನರು ಸದಾ ಕಾಲ ನೆನಪಿನಲ್ಲಿರುತ್ತಾರೆ ಎಂದರು.

ಇದೇ ಸಂದರ್ಬದಲ್ಲಿ ಸರಕಾರದ ನಾನಾ ಸವಲತ್ತುಗಳನ್ನು ಗ್ರಾಮ ಪಂಚಾಯತಿಯ ಫಲಾನುಭವಿಗಳಗೆ ವಿತರಿಸಲಾಯಿತು.

ಬ್ರಹ್ಮಾವರ ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಕೆ.ಎನ್ ಇಬ್ರಾಹಿಂ ಪುರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅನಿತಾ ರತ್ನಶಕರ ಶೆಟ್ಟಿ , ಅಭಿವೃದ್ಧಿ ಅಧಿಕಾರಿ ಪ್ರಣಿತಾ, ಕಾರ್ಯದರ್ಶಿ ಜ್ಯೋತಿ ಪ್ರಕಾಶ್ , ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಇದರ ಅಧ್ಯಕ್ಷ ಮೈರ್ಮಾಡಿ ಅಶೊಕ್ ಕುಮಾರ್ ಶೆಟ್ಟಿ , ಇನಕರ ಶೆಟ್ಟಿ , ಬಾಲಕೃಷ್ಣ ಶೆಟ್ಟಿ ಕರ್ಜೆ , ನಿವೃತ್ತ ಮುಖ್ಯೋಪದ್ಯಾಯ ಜಯರಾಮ ಶೆಟ್ಟಿ , ಸಹಕಾರಿ ಧುರೀಣ ವೆಂಕಟಕೃಷ್ಣ ಗೋಳಿ, ಬಾಲಕೃಷ್ಣ ಶೆಟ್ಟಿ ಹೊಳೆಬಾಗಿಲು ಮತ್ತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.



































