ಬೆಂಗಳೂರು : ಹಿಜಾಬ್ ವಿವಾದದ ಕುರಿತು ಇಂದು ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಸಿಜೆ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ದೀಕ್ಷಿತ್, ಜೆಎಮ್ ಖಾಜಿಯವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು.
ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಯಲಿದೆ. ಆದಷ್ಟು ಬೇಗ ತೀರ್ಪು ನೀಡಲಾಗುವುದು. ಅಂತಿಮ ಆದೇಶದ ವರೆಗೂ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶವಿಲ್ಲ. ಶಾಲೆ ಕಾಲೇಜು ಆರಂಭಿಸುವಂತೆ ಹೈಕೋರ್ಟ್ ಸೂಚಿಸಿದೆ.
Advertisement. Scroll to continue reading.
ಸರ್ಕಾರದ ಪರ ಪ್ರಭುಲಿಂಗ ನಾವದಗಿ, ಕಾಲೇಜು ಆಡಳಿತ ಮಂಡಳಿ ಪರ ವಕೀಲ ಸಜನ್ ಪೂವಯ್ಯ, ಅರ್ಜಿದಾರರ ಪರ ಮೊಹಮ್ಮದ್ ತಾಹೀರ್, ದೇವದತ್ ಕಾಮತ್, ಸಂಜಯ್ ಹೆಗಡೆ, ಕಾಳೇಶ್ವರ್ ರಾಜ್ ವಾದ ಮಂಡಿಸಿದರು.