ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯದ ಮುಖ್ಯಮಂತ್ರಿಯವರ ಮಹಾತ್ವಾಕಾಂಶಿ ಯೋಜನೆ ಸರಕಾರದ 600 ಕ್ಕೂ ಹೆಚ್ಚು ಸೇವೆಯನ್ನು ಒಳಗೊಂಡ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಜನವರಿ 26 ರಂದು ಲೋಕಾರ್ಪಣೆಗೊಂಡು ಉಡುಪಿ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜನರಿಗೆ ಯಾವ ರೀತಿಯಲ್ಲಿ ಸೇವೆ ದೊರಕುತ್ತದೆ ಎಂದು ಪರೀಶೀಲನೆಗೆ ನೋಡಲ್ ಅಧಿಕಾರಿ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ರಾಜುರವರು ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಹೊಂದಿದ ಶ್ರೀ ದೇವಿ ಕಾಂಪ್ಲೆಕ್ಸ್ ಗೆ ಗುರುವಾರ ಭೇಟಿ ನೀಡಿದರು.

ಸೇವಾ ಕೇಂದ್ರದ ಮಾಲಿಕ ರಾಜಶೇಖರ್ ಎನ್ ಅಧಿಕಾರಿಗಳಿಗೆ ಸೇವಾ ಕೇಂದ್ರದ ಮಾಹಿತಿ ನೀಡಿದರು.
ಈ ಸಂದರ್ಭ ಅಸಿಸ್ಟೆಂಟ್ ಕಮಿಷನರ್ ರಾಜುರವರು ಮಾತನಾಡಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ತ್ವರಿತವಾಗಿ ಉತ್ತಮ ಸೇವೆ ನೀಡಲು ಸೇವಾ ಕೇಂದ್ರ ಸಹಕಾರಿಯಾಗಲಿದೆ. ಆರಂಭಗೊಂಡು ಕೆಲವೇ ದಿನಗಳು ಆದ ಕಾರಣ ತಾಂತ್ರಿಕವಾಗಿ ಕೆಲವು ಭಾಗದಲ್ಲಿ ತೊಂದರೆ ಇದೆ. ಅದನ್ನು ಸರಿಪಡಿಸಲಾಗುವುದು ಇಲ್ಲಿನ ಕೇಂದ್ರ ಉತ್ತಮ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಹ್ಮಾವರ ಹೋಬಳಿಯ ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್, ಕೋಟದ ಕಂದಾಯ ನೀರೀಕ್ಷಕ ರಾಜು, ಗ್ರಾಮ ಲೆಕ್ಕಿಗರಾದ ಐರಿನ್ ಶಾಂತಿ ಪಿರೇರಾ ಉಪಸ್ಥಿತರಿದ್ದರು.



































