ಲೇಖಕಿ : ರೋಶನಿ
ಫೆಬ್ರವರಿ ಹದಿನಾಲ್ಕು ಎಂದಾಗ ನೆನಪಾಗುವುದು ಬರೀ ಪ್ರೇಮಿಗಳ ದಿನಚರಣೆ ಮಾತ್ರವಲ್ಲ, ಇಡೀ ದೇಶವನ್ನು ಬೆಚ್ಚಿ ಬೀಳಿಸಿ, ನಡುಗಿಸಿದಂತಹ ಪುಲ್ವಾಮದ ಭೀಕರ ಘಟನೆ ಸಹ ಒಂದು. ದ್ವೇಷದ ಜ್ವಾಲೆಗೆ ಬಲಿಯಾದ ನಮ್ಮ ವೀರ ಯೋಧರ ವೀರ ಮರಣವನ್ನು ಸ್ಮರಿಸುವಂತಹ ದಿನ. ನೂರಾರು ಕನಸುಗಳನ್ನು ಹೊತ್ತುಕೊಂಡು ದೇಶದ ಭವಿಷ್ಯಕ್ಕೆ ನಾಂದಿ ಹಾಡುತ್ತ ಮನೆಯವರ ನೆನಪಿನೊಂದಿಗೆ ದೇಶಸೇವೆಗೆ ಹಿಂತಿರುಗುವಾಗ ಶತ್ರುಗಳ ಅಟ್ಟಹಾಸಕ್ಕೆ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಮುಡಿಪಾಗಿಸಿದ ಯೋಧರೇ ನೀವೆಂದಿಗೂ ಅಮರ.
ಪ್ರೇಮಿಗಳ ದಿನಾಚರಣೆಯ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದು ಕಡೆ ಯೋಧರ ಅಕಾಲಿಕ ವೀರಮರಣವನ್ನು ಊಹಿಸಲಾಗದ ಕರಾಳ ದಿನ. ದೇಶದ ಜನರನ್ನು ದುಃಖದ ಮಡುವಿನ ವಾತಾವರಣಕ್ಕೆ ಸೃಷ್ಟಿಸಿದ ನಿರಾಳ ಮೌನ .
ಘಟನೆ ಸಂಭವಿಸಿ ವರುಷಗಳಾದರು ಆದರೂ ಯೋಧರೇ ನಿಮ್ಮ ಸೇವೆ ಅವಿಸ್ಮರಣೀಯ. ನಿಮ್ಮ ತ್ಯಾಗ ಬಲಿದಾನಕ್ಕೆ ಪದಗಳನ್ನು ವರ್ಣಿಸಲು ನಮ್ಮಿಂದ ಅಸಾಧ್ಯ. ಪ್ರತಿಯೊಬ್ಬ ಭಾರತೀಯರ ಎದೆಯಲ್ಲಿ ಇವತ್ತಿಗೂ ಅಚ್ಚಳಿಯಾಗಿ ನಿಮ್ಮೆಲ್ಲರ ನೆನಪು ಉಳಿದು ಹೋಗಿದೆ. ಈ ದಿನದಂದು ನಿಮ್ಮೆಲ್ಲರನ್ನು ಕಳೆದುಕೊಂಡ ಬೇಸರ ಇಂದಿಗೂ ಇದೆ. ಆದರೆ, ನೀವು ದೇಶಕ್ಕೆ ನೀಡಿದ ಕೊಡುಗೆಗೆ ನಾವೆಲ್ಲರೂ ಚಿರೃಣಿಯಾಗಿದ್ದೇವೆ.
ಯೋಧರೇ ಮತ್ತೆ ಹುಟ್ಟಿ ಬನ್ನಿ ಈ ದೇಶ ನಿಮಗಾಗಿ ಕಾಯುತ್ತಿದೆ. ಚರಿತ್ರೆಯ ಪುಟವನ್ನು ಸೇರಿದ ನಿಮ್ಮ ವೀರ ಮರಣ ನಮ್ಮ ಕೊನೆ ಉಸಿರಲ್ಲೂ ಜೀವಂತವಾಗಿರುತ್ತದೆ .
ಜೈ ಭಾರತ್ ಮಾತಾ



































