Connect with us

Hi, what are you looking for?

Diksoochi News

ರಾಜ್ಯ

ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಗ್ರೀನ್ ಸಿಗ್ನಲ್; ರಾಜ್ಯ ಸರ್ಕಾರದ ಆದೇಶವನ್ನು ರದ್ದು ಮಾಡಿದ ಹೈಕೋರ್ಟ್

2

ಬೆಂಗಳೂರು: ರಾಜ್ಯದಲ್ಲಿ ಆನ್ ಲೈನ್ ಗೇಮ್ ನಿಷೇಧ ನೀಡಿದ ಸರ್ಕಾರ ಆದೇಶವನ್ನು, ಇಂದು ಹೈಕೋರ್ಟ್ ರದ್ದು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದ್ದಂತ ಆನ್ ಲೈನ್ ಗೇಮ್ ನಿಷೇಧದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.

ರಾಜ್ಯದಲ್ಲಿ ಆನ್ ಲೈನ್ ಗೇಮ್  ನಿಷೇಧ ನೀಡಿದ ಸರ್ಕಾರ ಆದೇಶವನ್ನು ರದ್ದು ಮಾಡಿ ಹೈಕೋರ್ಟ್ ಆದೇಶಿಸಿದೆ. ಸರ್ಕಾರದ ಕ್ರಮ ಸಂವಿಧಾನ ಬದ್ದವಾಗಿಲ್ಲ. ಆನ್ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನ ಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ. ಆದರೆ ಈಗಿನ ಆದೇಶ ಕಾನೂನುಬಾಹಿರ ಎಂದು  ಹೈಕೋರ್ಟ್ ತಿಳಿಸಿದೆ.

Advertisement. Scroll to continue reading.

ರಾಜ್ಯ ಸರ್ಕಾರ ಈ ಹಿಂದೆ ಆನ್ ಲೈನ್ ಗೇಮ್ ಗಳನ್ನು ರದ್ದು ಪಡಿಸಿತ್ತು. ಈ ಮೂಲಕ ರಾಜ್ಯಾದ್ಯಂತ ಆನ್ ಲೈನ್ ಆಟಕ್ಕೆ ಬ್ರೇಕ್ ಹಾಕಿತ್ತು. ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಮತ್ತೆ ಆನ್ ಲೈನ್ ಗೇಮ್ ಆರಂಭವಾಗಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!