ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಲವಾರು ರಾಜವಂಶದವರು ಆಳ್ವಿಕೆ ಮಾಡಿದ ಬಾರಕೂರು ಚೌಳಿಕೇರಿಯಲ್ಲಿ ಯಾರಿಗೂ ಕಾಣದಂತಿರುವ ಹಾಡಿಯೊಂದರ ನಡುವೆ ಇದ್ದ ಪಾಳು ಬಿದ್ದ ಶಿವ ದೇವಾಲಯವೊಂದನ್ನು ಭಾನುವಾರ ಯುವ ಬ್ರಿಗೇಡ್ ಕುಂದಾಪುರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತೆ ಮಾಡಲಾಯಿತು.

ಕ್ರಿ.ಶ 11 ನೇ ಶತಮಾನದ್ದೆಂದು ಹೇಳಲಾಗುತ್ತಿರುವ ಶ್ರೀ ಗೌರೀಶ್ವರ ದೇಗುಲದ ಪಳಿಯುಳಿಕೆಯಲ್ಲಿ ಮಿಥುನ ನಾಗ ಶಿಲ್ಪ, ಅವಳಿ ನಾಗ ಶಿಲ್ಪ, ಬಿಳಿಯ ಶಿಲೆಯಿಂದ ಶ್ರೀ ಗೌರೀಶ್ವರ ಮೂರ್ತಿ ಇದ್ದು, ಶೈವ ಹಾಗೂ ವೈಷ್ಣವ ದೇವಾಲಯ ಇರುವ ಅಪರೂಪದ ಸಂಗಮ ಸ್ಥಳದಂತಿದೆ ಎನ್ನುತ್ತಾರೆ ಇತಿಹಾಸ ಉಪನ್ಯಾಸಕ ಅರುಣ್ ಕುಮಾರ್.

ಯುವಾ ಬ್ರಿಗೇಡ್ ನ ನಿರಂಜನ್ ಶೆಟ್ಟಿ ತಲ್ಲೂರು, ಪ್ರಮೋದ್, ಪ್ರದೀಪ, ಶಶಿ, ಸುಬ್ರಹ್ಮಣ್ಯ, ಸತೀಶ್ ಗುಂಡ್ಮಿ,ಭರತ್ ಗುಡಿಗಾರ್,ಪ್ರಶಾಂತ್ ಖಾರ್ವಿ ಸೇರಿದಂತೆ ಅನೇಕರು ಸ್ಚಚ್ಚತಾ ಕಾರ್ಯದಲ್ಲಿದ್ದರು.
Advertisement. Scroll to continue reading.

In this article:barkuru, Choulikeri, Diksoochi news, diksoochi Tv, diksoochi udupi, lord Shiva temple
Click to comment

































