Connect with us

Hi, what are you looking for?

Diksoochi News

ಸಿನಿಮಾ

ಖ್ಯಾತ ಹಿರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹರಿ ನಿಧನ

3

ನವದೆಹಲಿ: ಹಿರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಹೀಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬಪ್ಪಿ ಡಾ ಎಂದು ಜನಪ್ರಿಯರಾಗಿದ್ದ ಅವರು ಭಾರತೀಯ ಗಾಯಕ, ಸಂಯೋಜಕ, ರಾಜಕಾರಣಿ ಮತ್ತು ರೆಕಾರ್ಡ್ ನಿರ್ಮಾಪಕರಾಗಿದ್ದರು. ಅವರು ಭಾರತೀಯ ಸಿನೆಮಾದಲ್ಲಿ ಸಂಶ್ಲೇಷಿತ ಡಿಸ್ಕೋ ಸಂಗೀತದ ಬಳಕೆಯನ್ನು ಜನಪ್ರಿಯಗೊಳಿಸಿದರು.

Advertisement. Scroll to continue reading.

ಡಿಸ್ಕೋ ಕಿಂಗ್:

27 ನವೆಂಬರ್ 1952 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದರು. ಅವರ ತಂದೆ ಹೆಸರು ಅಪರೇಶ್ ಲಹರಿ ಮತ್ತು ತಾಯಿಯ ಹೆಸರು ಬನ್ಸಾರಿ ಲಹರಿ. 70-80ರ ದಶಕದಲ್ಲಿ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಖ್ಯಾತಿ ಬಪ್ಪಿ ಅವರಿಗೆ ಸಲ್ಲುತ್ತದೆ.

ಮಿಥುನ್ ಚಕ್ರವರ್ತಿ ಅವರ ಐಯಾಮ್ ಎ ಡಿಸ್ಕೋ ಡ್ಯಾನ್ಸರ್ ಹಾಡು ಇಂದಿಗೂ ಜನಪ್ರಿಯ.

ಅಮರ್ ಸಂಗೀತಾ, ಆಶಾ ಓ ಭಾಲೋಬಾಷಾ, ಅಮರ್ ತುಮಿ, ಅಮರ್ ಪ್ರೇಮ್, ಮಂಡಿರಾ, ಬದ್ನಮ್, ರಕ್ತೆಖಾ, ಪ್ರಿಯಾ, ವಾರ್ಡತ್, ಡಿಸ್ಕೋ ಡ್ಯಾನ್ಸರ್, ನಮಕ್ ಹಲಾಲ್, ಶರಾಬಿ, ನೃತ್ಯ ನೃತ್ಯ, ಕಮಾಂಡೋ, ಸಾಹೇಬ್, ಗ್ಯಾಂಗ್ ಲೀಡರ್, ಸೈಲಾಬ್ ಮೊದಲಾದ ಚಿತ್ರಗಳು ಭಾರೀ ಯಶಸ್ಸು ಬಾಚಿಕೊಂಡಿವೆ. ಭಾಗಿ 3 ಚಿತ್ರಕ್ಕಾಗಿ ಅವರು ಹಾಡಿದ ಹಾಡು ಕೊನೆಯದಾಗಿತ್ತು.

Advertisement. Scroll to continue reading.

ರಾಜಕೀಯ :

ಬಪ್ಪಿ ಲಹರಿ 2004 ರಲ್ಲಿ ಬಿಜೆಪಿ ಸೇರಿದರು. 2014ರ ಭಾರತೀಯ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಶ್ರೀರಾಂಪುರ (ಲೋಕಸಭಾ ಕ್ಷೇತ್ರ) ನಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಮತ್ತು ಸೋತಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!