ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಏಕನಾಥೇಶ್ವರೀ ದೇವಸ್ಥಾನ ಬಾರಕೂರಿನಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಫೆಬ್ರವರಿ 19 ರ ತನಕ ಚತುರ್ಥ ವಾರ್ಷಿಕ ವರ್ಧಂತ್ಯುತ್ಸವ ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಬುಧವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಸಂಚಾಲಕರಾದ ಎಚ್ ಮೋಹನ್ ದಾಸ್ ಕಾರ್ಯಕ್ರಮದ ಮಾಹಿತಿ ನೀಡಿ, 19 ರಂದು ಬೆಳಿಗ್ಗೆ ಸಾಮೂಹಿಕ ಚಂಡಿಕಾಯಾಗ , ವಧು ವರರ ನೊಂದಣೆ ಮತ್ತು ವರಾನ್ವೇಷಣೆ , ತುಲಾಭಾರ ಸೇವೆ ಇನ್ನಿತರ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ ಸಭಾ ಕಾರ್ಯ ಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋವಿಂದ ಬಾಬು ಪೂಜಾರಿ, ಅಕ್ಷತಾ ದೇವಾಡಿಗ, ಮಂಗಳಾ ಕಿಶೋರ್ , ಉಮಾನಾಥ್ ದೇವಾಡಿಗ ಕಾಪು ಪುರಸಭೆಗೆ ಚುನಾಯಿತರಾದ ಸುರೇಶ್ ದೇವಾಡಿಗ ಹರಿಣಾಕ್ಷಿ ದೇವಾಡಿಗ, ಲತಾ ದೇವಾಡಿಗರನ್ನು ಸನ್ಮಾನಿಸಲಾಗುವುದು ಎಂದರು.

ದೇವಸ್ಥಾನ ವತಿಯಿಂದ ಮತ್ತು ಹಲವಾರು ದಾನಿಗಳ ನೆರವಿನಿಂದ ಸಮಾಜದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದು ಮುಂದಿನ ಹಂತವಾಗಿ ಸಮಾಜದ ವಿದ್ಯಾರ್ಥಿಗಳು ಐ. ಏ. ಎಸ್ ಮತ್ತು ಕೆ. ಏ .ಎಸ್ ಮಾಡುವ 5 ಮಂದಿಗೆ ಆರ್ಥಿಕವಾಗಿ ನೆರವಾಗಿದ್ದು ಶಿಕ್ಷಣಕ್ಕೆ ನೆರವಾಗುತ್ತಿದ್ದೇವೆ . ಮುಂದಿನ ದಿನದಲಲಿ ವಿಶ್ವ ದೇವಾಡಿಗರ ಸಂಘಟನೆ ಮತ್ತು ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆಯ ಕುರಿತು ಯೋಜನೆ ರೂಪಿಸಲಾಗುವುದು ಎಂದರು.
17 ರಂದು ಮಧ್ಯಾಹ್ನ 3-30 ಕ್ಕೆ ವಿವಿಧ ದೇವಾಡಿಗ ಸಂಘ ಸಂಘ ಮತತು ಸಮಾಜ ಬಾಂಧವರಿಂದ ಬಾರಕೂರು ಸೇತುವೆಯ ಬಳಿಯಿಂದ ಕಲ್ಲು ಚಪ್ಪರದ ಮೂಲಕ ಹೊರೆಕಾಣಿಕೆ 18 ರಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ನಾನಾ ಭಾಗದ ದೇವಾಡಿಗ ಸಮಾಜದವರಿಂದ ಭಜನಾ ಕಾರ್ಯಕ್ರಮ ಜರುಗಿಲಿದೆ .
ಜನಾರ್ಧನ ದೇವಾಡಿಗ ಬಾರಕೂರು, ನರಸಿಂಹ ದೇವಾಡಿಗ ಉಡುಪಿ ,ಗಣೇಶ್ ದೇವಾಡಿಗ ಅಂಬಲಪಾಡಿ , ವೇಣುಗೋಪಾಲ್ ಬ್ರಹ್ಮಾವರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


































