ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಿಯಾದ ಸರ್ವೀಸ್ ರಸ್ತೆ ಇಲ್ಲದಿರುವುದು ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಸಮಸ್ಯೆಯಿಂದ ಇಲ್ಲಿ ಹಲವಾರು ಅಫಘಾತ ಸಾವು ನೋವು ಸಂಭವಿಸಿರುವ ಹಿನ್ನೆಲೆಯಲ್ಲಿ ಇರುವ ವ್ಯವಸ್ಥೆಯಲ್ಲಿ ಸುರಕ್ಷಿತ ಸಂಚಾರದ ಮಾರ್ಪಾಡು ಮಾಡಲು ಬ್ರಹ್ಮಾವರ ಪಿ ಎಸ್ ಐ ಗುರುನಾಥ್ ಬಿ. ಹಾದಿಮನೆ ಗುರುವಾರ ಸಂಜೆ ಉನ್ನತಿ ಸಭಾಭವನದಲ್ಲಿ ಹಲವಾರು ಸಂಘ ಸಂಸ್ಥೆ ಮತ್ತು ಅಂಗಡಿ ಮಾಲಿಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇಲ್ಲಿ ನಗರ ಭಾಗ ಸೇರಿದಂತೆ ಬಹತೇಕ ಕಡೆ ಬಹು ಮಹಡಿಯ ಕಟ್ಟಡ ಆಗಿರುವುದು ವಾಹನ ಇರಿಸಲು ಜಾಗ ಇರಿಸದಿರುವುದು ಈ ಎಲ್ಲಾ ಸಮಸ್ಯೆ ಜೊತೆ ಸರಿಯಾಗಿ 2 ಭಾಗದಲ್ಲಿ ಸರ್ವಿಸ್ ರಸ್ತೆ ಕೂಡಾ ಇಲ್ಲದಿರುವುದು ಬಸ್‍ಗಳು ಎಲ್ಲವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದು ಇದೆಲ್ಲದ್ದಕ್ಕೆ ಕಳೆದ ಒಂದು ವಾರದ ಹಿಂದೆ ಪಿ ಎಸ್ ಐ ಗುರುನಾಥ್ ಬಿ. ಹಾದಿಮನೆ ಹಲವಾರು ಮಾರ್ಪಾಡು ಮಾಡಿ ಯಶಸ್ವಿಯಾಗಿದ್ದರು.

ಉಪ್ಪಿನ ಕೋಟೆಯ ಬಳಿಯ ಧರ್ಮಾವರದಿಂದ ಮಹೇಶ್ ಆಸ್ಪತ್ರೆಯ ತನಕ ಉಡುಪಿ ಕಡೆಗೆ ಹೋಗುವ ಎಲ್ಲಾ ಸರ್ವೀಸ್ ಬಸ್ ಗಳನ್ನು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಿದ ಕಾರಣ ಹೈವೆಯಲ್ಲಿ ಸಂಚರಿಸುವವರಿಗೆ ಸ್ವಲ್ಪ ನಿರಾಳವಾಗಿದ್ದು ಇದೀಗ ನಗರ ಭಾಗದಲ್ಲಿ ಸಂಚಾರ ವ್ಯವಸ್ಥೆಯನ್ನು ಮಾರ್ಪಾಡು ಮಾಡಲು ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಬ್ರಹ್ಮಾವರ ರೋಟರಿ ಅಧ್ಯಕ್ಷ ಹರೀಶ್ ಕುಂದರ್ , ಬಂಟರ ಸಂಘದ ಅಧ್ಯಕ್ಷ ರಾಜಾರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಟ್ಯಾಕ್ಷಿ ಮತ್ತು ಅಟೋ ಚಾಲಕ ಮಾಲಕರ ಸಂಘದ ಪಧಾಧಿಕಾರಿಗಳು ಸಾರ್ವ ಜನಿಕರು ಸಂಚಾರ ಸುಗಮ ಮಾಡಲು ಹಲವಾರು ಅಭಿಪ್ರಾಯವನ್ನು ತಿಳಿಸಿದರು.
ಪೊಲೀಸ್ ಠಾಣೆಯ ಪ್ರವೀಣ್ ಬಿ., ದಿಲೀಪ್ ಉಪಸ್ಥಿತರಿದ್ದರು



































