Connect with us

Hi, what are you looking for?

Diksoochi News

ಕರಾವಳಿ

ಬಾರಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ; ಹೊರೆ ಕಾಣಿಕೆ ಸಮರ್ಪಣೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಶ್ರೀಏಕನಾಥೇಶ್ವರೀ ದೇವಸ್ಥಾನ ಬಾರಕೂರು ಇಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಫೆಬ್ರವರಿ 19 ರ ತನಕ ಚತುರ್ಥ ವಾರ್ಷಿಕ ವರ್ಧಂತ್ಯುತ್ಸವದ ಅಂಗವಾಗಿ ಗುರುವಾರ ಬಾರಕೂರು ಸೇತುವೆ ಬಳಿಯಿಂದ ಹೊರೆ ಕಾಣಿಕೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿಬಂತು.
ಶುಕ್ರವಾರ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ನಾನಾ ಭಾಗದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು.


ಶನಿವಾರ ವೇದಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ ಜರುಗಲಿದೆ.


ಬಳಿಕ ವಧು ವರರ ನೋಂದಣಿ ಮತ್ತು ವರಾನ್ವೇಷಣೆ, ತುಲಾಭಾರ ಸೇವೆ ಇನ್ನಿತರ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ ಸಭಾ ಕಾರ್ಯ ಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತೀ ಪುರಸ್ಕೃತ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋವಿಂದ ಬಾಬು ಪೂಜಾರಿ, ಅಕ್ಷತಾ ದೇವಾಡಿಗ, ಮಂಗಳಾ ಕಿಶೋರ್, ಉಮಾನಾಥ್ ದೇವಾಡಿಗ ಕಾಪು ಪುರಸಭೆಗೆ ಚುನಾಯಿತರಾದ ಸುರೇಶ್ ದೇವಾಡಿಗ ಹರಿಣಾಕ್ಷಿ ದೇವಾಡಿಗ ಲತಾ ದೇವಾಡಿಗರನ್ನು ಸನ್ಮಾನಿಸಲಾಗುವುದು.


ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಮುಖ್ಯ ಸಂಚಾಲಕರಾದ ಎಚ್ ಮೋಹನ್ ದಾಸ್, ಜನಾರ್ಧನ ದೇವಾಡಿಗ ಬಾರಕೂರು, ನರಸಿಂಹ ದೇವಾಡಿಗ ಉಡುಪಿ, ಗಣೇಶ್ ದೇವಾಡಿಗ ಅಂಬಲಪಾಡಿ, ವೇಣುಗೋಪಾಲ್ ಬ್ರಹ್ಮಾವರ ಸೇರಿದಂತೆ ಅನೇಕರು ಇಂದು ನೇತೃತ್ವ ವಹಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!