Connect with us

Hi, what are you looking for?

Diksoochi News

ಕರಾವಳಿ

ಹಿರಿಯಡ್ಕ : ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

1

ಹಿರಿಯಡ್ಕ: ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಂಜಾರು ಗ್ರಾಮದ ಕಾಜಾರಗುತ್ತುವಿನಲ್ಲಿ ನಡೆದಿದೆ. ಜಿಸಾನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಜಿಸಾನ್ ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10 ನೇ ತರಗತಿ  ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಆತನು ಈ ಮೊದಲಿನಿಂದಲೂ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಒಬ್ಬಂಟಿಯಾಗಿ ಇರುತ್ತಿದ್ದನು. ಎಷ್ಟು ಬೇಕು ಅಷ್ಟೆ ಮಾತನಾಡುತ್ತಿದ್ದನು. ಕಳೆದ ವಾರ ಶಾಲೆಗೆ ಸರಿಯಾಗಿ ಹೋಗದೇ ಇದ್ದು, ಶನಿವಾರ ಮಾತ್ರ ಶಾಲೆಗೆ ಹೋಗಿದ್ದಾನೆ ಎನ್ನಲಾಗಿದೆ. ಸೋಮವಾರ ಆತನಿಗೆ  ಪರೀಕ್ಷೆ  ಇತ್ತು. ಆದರೆ, ಆತ ಹೊಗದೇ ಇದ್ದ ಬಗ್ಗೆ ತಾಯಿ ಆಕ್ಷೇಪ ವ್ಯಕ್ತ ಪಡಿಸಿದ್ದರು ಎನ್ನಲಾಗಿದೆ.

ತಾಯಿ ಕೆಲಸಕ್ಕೆ ಹೋದ ವೇಳೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪರೀಕ್ಷೆಯ ಭಯದಿಂದಲೋ ಅಥವಾ ತನ್ನ ಯಾವುದೋ ವ್ಯೆಯಕ್ತಿಕ ಕಾರಣದಿಂದಲೋ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!