ಉಡುಪಿ: ಖಾಸಗಿ ಬಸ್ಸೊಂದು ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ.
ಬಳ್ಳಾರಿಯ ಕೊಟ್ಟೂರಿನಿಂದ ಮಂಗಳೂರಿಗೆ ದುರ್ಗಾಂಬ ಬಸ್ ಆಗಮಿಸುತ್ತಿತ್ತು. ಮಣಿಪಾಲದ ಟೈಗರ್ ಸರ್ಕಲ್ ಬಳಿ ಬರುತ್ತಿದ್ದಂತೆಯೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಚಾಲಕನ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು. ಬಸ್ಸು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.