ಸಿಂಗಾಪುರ: ಭಾರತದ ಸ್ಟಾರ್ ಲಿಫ್ಟರ್ ಮೀರಾಬಾಯಿ ಚಾನು ಶುಕ್ರವಾರ ಸಿಂಗಾಪುರದ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಶನಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ 55 ಕೆಜಿ ತೂಕದ ವಿಭಾಗದಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಮೊದಲ ಬಾರಿಗೆ 55 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ ಚಾನು 191 ಕೆಜಿ (86 ಕೆಜಿ + 105 ಕೆಜಿ) ಎತ್ತುವ ಮೂಲಕ ಗೆಲುವು ಪಡೆದಿದ್ದಾರೆ.
ಡಿಸೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ನಂತರ, ಕಳೆದ ವರ್ಷ ಐತಿಹಾಸಿಕ ಟೋಕಿಯೊ ಕ್ರೀಡಾಕೂಟದ ಪ್ರದರ್ಶನದ ನಂತರ ಚಾನು ಅವರ ಮೊದಲ ಸ್ಪರ್ಧೆಯಾಗಿದೆ. ಅವರು ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ಪಡೆದರು.

ಸಿಂಗಾಪುರ್ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಶನಲ್ 2022 ರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತಾ ಪಂದ್ಯವಾಗಿದೆ. ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪ್ರತಿ ತೂಕದ ವಿಭಾಗದಲ್ಲಿ ಅಗ್ರ ಎಂಟು ಲಿಫ್ಟರ್‌ಗಳು ನೇರವಾಗಿ 2022 ಸಿಡಬ್ಲೂಡಿಗೆ ಅರ್ಹತೆ ಪಡೆಯುತ್ತಾರೆ.


































