Connect with us

Hi, what are you looking for?

Diksoochi News

ಕರಾವಳಿ

ಬಾರ್ಕೂರು : ಚೌಳಿಕೇರಿ ಗೌರೀಶ್ವರ ಮತ್ತು ಸಹಸ್ರ ವಿಷ್ಣು ದೇವಸ್ಥಾನಕ್ಕೆ ಹೊಸ ಕಾಯಕಲ್ಪ; ಶಿವರಾತ್ರಿ ಪೂಜೆ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ದೇವಾಲಯಗಳ ನಗರ ಬಾರಕೂರಿನ ಚೌಳಿಕೇರಿಯ ಹಾಡಿಯೊಂದರಲ್ಲಿ ಪೂಜೆ ಪುನಸ್ಕಾರ ಇಲ್ಲದೆ ಅವಶೇಷ ಮಾತ್ರ ಇದ್ದ ಗೌರೀಶ್ವರ ಮತ್ತು ಸಹಸ್ರ ವಿಷ್ಣು ದೇವಸ್ಥಾನಕ್ಕೆ ಮಂಗಳವಾರ ಶಿವರಾತ್ರಿಯಂದು ಹೊಸ ಕಳೆ ಬಂದು ಪೂಜೆ, ಭಜನೆ ನಡೆದಿದೆ.

ಸಮಾನ ಮನಸ್ಕ ಯುವ ತಂಡ ಯುವ ಬ್ರಿಗೇಡ್ ಯುವಕರು ಕಳೆದ ಕೆಲವು ಸಮಯದಿಂದ ಈ ದೇವಸ್ಥಾನದ ಸುತ್ತ ಮುತ್ತ ಇರುವ ಗಿಡಗಂಟಿಗಳನ್ನು ಕಡಿದು ಸ್ವಚ್ಛ ಗೊಳಿಸಿ ದೇವಸ್ಥಾನಕ್ಕೆ ಸಾರ್ವ ಜನಿಕರ ಸಂಪರ್ಕ ಕೊಡಿಸಿದೆ.

ಅತೀ ಸುಂದರವಾದ ಶಿವಲಿಂಗ ಮಾತ್ರ ಇರುವ ಗೌರೀಶ್ವರ ವಾದರೆ, ಸಹಸ್ರ ವಿಷ್ಣು ಮೂರ್ತಿ ಧರ್ಮಸ್ಥಳದ ವಸ್ತು ಪ್ರದರ್ಶನದಲ್ಲಿದೆ.

Advertisement. Scroll to continue reading.


ಶಿವರಾತ್ರಿಯ ದಿನದಂದು ಸಂಜೆ ಸ್ಥಳಿಯ ಭಜನಾ ತಂಡದಿಂದ ಭಜನೆ ಚಂಡೆಯ ನಿನಾದ ಮತ್ತು ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಿ ನೂರಾರು ಭಕ್ತರು ಆಗಮಿಸಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.


ಬಾರಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಶಿಥಿಲಾವಸ್ಥೆ ಯಲ್ಲಿರುವ ದೇವಸ್ಥಾನಕ್ಕೆ ಬಂದು ಯುವಕರ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಜೀಣೋದ್ಧಾರದ ಯೋಜನೆಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.


ಸುತ್ತಲೂ ಬೃಹತ್ ಮರಗಳ ನಡುವೆ ಇದ್ದ ಈ ಪ್ರಾಚೀನ ದೇವಸ್ಥಾನಕ್ಕೆ ಭಕ್ತರು ದಾನಿಗಳು ನೆರವು ನೀಡಿ ಹೊಸ ಚೈತನ್ಯ ನೀಡುವ ಕಾರ್ಯ ಮಾಡ ಬೇಕಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!