ಕೋಟ : ಶ್ರೀನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ (ರಿ) ದೊಡ್ಡೋಣಿ ಕೋಟೇಶ್ವರ ವತಿಯಿಂದ 15ನೇ ವರ್ಷದ ಮಹಾ ಶಿವರಾತ್ರಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಥಶಿಲ್ಪಿ ರಾಜ್ ಗೋಪಾಲ ಆಚಾರ್ಯ ಸನ್ಮಾನ ಮಾಡಲಾಯಿತು.
ಕರಾಟೆ ಪ್ರತಿಭೆ ಚೇತನ್ ಹಾಗು ಗುತ್ತಿಗೆದಾರರಾದ ಸಂಪತ್ ಶೆಟ್ಟಿಯವರನ್ನು ಗೌರವಿಸಲಾಯಿತು.
Advertisement. Scroll to continue reading.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಸ್ಕರ್ ಆಚಾರ್ಯ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ರಾಜಗೋಪಾಲ ಆಚಾರ್ಯ , ಸಂಪತ್ ಕುಮಾರ್ ಶೆಟ್ಟಿ, ಶ್ರೀ ನೀರೇಶ್ವಾಲ್ಯ ಸಾಂಸ್ಕೃತಿಕ ಸಂಘ ದೊಡ್ಡೋಣಿಯ ಗೌರವಾಧ್ಯಕ್ಷ ಉಮೇಶ್ ಎಮ್ ಕುಮಾರ್, ಶ್ರೀ ನೀರೇಶ್ವಾಲ್ಯ ಸಾಂಸ್ಕೃತಿಕ ಸಂಘ ದೊಡ್ಡೋಣಿಯ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಲೋಹಿತ್ ಮೊದಲಾದವರು ಉಪಸ್ಥಿತರಿದ್ದರು
ನಯನ ವರದಿ ವಾಚಿಸಿದರು. ಪ್ರಥ್ವಿನಿ ಸ್ವಾಗತಿಸಿದರು. ನಿರೂಪಣೆ ಭರತ್ ರಾಜ್ , ಶ್ರೀಧರ್ ಜೋಗಿ, ಸುಶಾಂತ್ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.



































