ಕುಂದಾಪುರ: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಹಾಗು ದ್ವಿಚಕ್ರ ವಾಹನ ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಹೆಮ್ಮಾಡಿಯಲ್ಲಿ ನಡೆದಿದೆ.
ಸ್ಕೂಟಿಯಲ್ಲಿದ್ದ ಅರೆಹೊಳೆ ಎರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ ಮೃತ ದುರ್ದೈವಿ.

ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಮಣ್ಣು ಸಾಗಾಟದ ಟಿಪ್ಪರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದಿದ್ದು, ಅದೇ ದಾರಿಯಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಢಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ ಅಡಿಗೆ ಬೀಳುತ್ತಿದ್ದ ಮಗುವನ್ನು ತಪ್ಪಿಸಿದ ಮಹಿಳೆ ಬೊಬ್ಬೆ ಹೊಡೆದರು ಕೇಳಿಸದೇ ಟಿಪ್ಪರ್ ಆಕೆಯ ಮೇಲೆ ಹರಿದಿದೆ. ಮಗು ಹಾಗೂ ಆಕೆಯ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
Advertisement. Scroll to continue reading.

ವರದಿ : ದಿನೇಶ್ ರಾಯಪ್ಪನಮಠ


































