ಮಹಾರಾಷ್ಟ್ರ: ಬೊಲೆರೊ-ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಐವರು ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಮ್‌ಗಾಂವ್-ಜಲ್ನಾ ರಸ್ತೆಯಲ್ಲಿ ನಡೆದಿದೆ.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಜಲ್ನಾ ಜಿಲ್ಲೆಯ ನೆರ್ ಗ್ರಾಮದ ಕೆಲವರು ಶೇಗಾಂವ್‌ಗೆ ಬರುತ್ತಿದ್ದಾಗ, ಖಮ್‌ಗಾಂವ್ ಜಲ್ನಾ ರಸ್ತೆಯ ದೇಲ್‌ಗಾಂವ್ ರಾಜಾ ರಸ್ತೆಯಲ್ಲಿರುವ ಜಲ್ನಾ ಟೀ ಪಾಯಿಂಟ್‌ನಲ್ಲಿ ಬೊಲೆರೊ ಮತ್ತು ಟ್ರಕ್ ಅಪಘಾತಕ್ಕೀಡಾಗಿದೆ. ಮೃತರಲ್ಲಿ ಬೊಲೆರೋ ಚಾಲಕ, ಒಬ್ಬ ಮಹಿಳೆ ಸೇರಿದಂತೆ ಮೂವರು ಪುರುಷರು ಸೇರಿದ್ದಾರೆ ಎನ್ನಲಾಗಿದೆ.
ಗಾಯಾಳುಗಳನ್ನು ದೇಲ್ಗಾಂವ್ ರಾಜಾ ಮತ್ತು ಜಲ್ನಾಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Advertisement. Scroll to continue reading.

ದೇಲ್ಗಾಂವ್ ರಾಜಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.


































