ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಇಂದು ಎಲ್ಲೆಡೆಯಲ್ಲಿ ಹೋಳಿ ಹಬ್ಬದ ಸಂಭ್ರಮ
ಉತ್ತರ ಭಾರತದಲ್ಲಿ ಬಣ್ಣವನ್ನು ಎರಚಾಡುವ ಸಂಭ್ರಮವಾದರೆ ಕರಾವಳಿ ಭಾಗದಲ್ಲಿ ಮರಾಠಿ ಮತ್ತು ಕುಡುಬಿ, ಖಾರ್ವಿ ಸೇರಿದಂತೆ ಅನೇಕ ಕೊಂಕಣಿ ಭಾಷಿಗರಿಗೆ ಹೋಳಿ ಶಕ್ತಿ ದೇವಿಯ ಆರಾಧನಾ ಕ್ರಮ.

5 ದಿನದ ಹಿಂದೆ ಸಮುದಾಯದವರ ಗುರಿಕಾರರ ಮನೆಯ ಹತ್ತರ ಕಟ್ಟೆಯಲ್ಲಿ ಫಲವನ್ನು ಇರಿಸಿ 5 ದಿನಗಳ ಕಾಲ ವೃತ ನಿಯಮದಿಂದ ಇದ್ದು ದೇವರ ನಾಮ ಸ್ಮರಣೆ ಮಾಡುತ್ತಾ ದೇವಸ್ಥಾನ ಮನೆಗಳಿಗೆ ಹೋಗಿ ಸ್ತುತಿ ಮಾಡುತ್ತಾರೆ.

ಅವರದೇ ಆದ ರೀತಿ ರಿವಾಜಿನ ಬಣ್ಣದ ಬಟ್ಟೆಯಲ್ಲಿ ಗುಮಟೆ ಎನ್ನುವ ಚರ್ಮ ವಾದ್ಯವನ್ನು ನುಡಿಸುತ್ತಾರೆ. ಬಳಿಕ ಹಾಡಿನೊಂದಿಗೆ ಕೋಲಾಟ ನಡೆಯುತ್ತದೆ.

ಬಾರಕೂರು ಬಂಡೀಮಠದ ಗುರಿಕಾರ ಅಚ್ಯುತ ನಾಯ್ಕ್ ನೇತೃತ್ವದಲ್ಲಿ ತುಳಜಾ ಭವಾನಿ ಕಟ್ಟೆಯಲ್ಲಿ ಇಲ್ಲಿನ ಹೋಳಿ ತಂಡ ಗುಮಟೆಯನ್ನು ನುಡಿಸುತ್ತಾ ಸೇವೆಯನ್ನು ಸಲ್ಲಿಸಿ ತಂಡದ ಹಿರಿಯರಿಂದ ಪೂಜೆ ಮಾಡಿ ಸಾಮೂಹಿಕವಾಗಿ ಪ್ರಾರ್ಥಿಸಿ ಬಳಿಕ ಇಂದು ಫಲವನ್ನು ಕೆಳಗೆ ಇಳಿಸಲಾಗಿದೆ.
Advertisement. Scroll to continue reading.



































