ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಜಾತ್ರೆ ಎಪ್ರಿಲ್ 22 ರಂದು
ನಡೆಯಲಿದ್ದು ಅಂದು ಜಾತ್ರೆಯಲ್ಲಿ ವ್ಯಾಪಾರ ವ್ಯವಹಾರ ಮಾಡಲು ಹಿಂದುಯೇತರರಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ವಾರಂಬಳ್ಳಿ, ಹಂದಾಡಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಬ್ರಹ್ಮಾವರ ತಹಶೀಲ್ದಾರ್ ರಾಜ ಶೇಖರ ಮೂರ್ತಿಯವರಿಗೆ ಮತ್ತು ದೇವಸ್ಥಾನದ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಭಟ್ ರಿಗೆ ವಿಶ್ವ ಹಿಂದು ಪರಿಷದ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ ಯವರು ಮನವಿ ಸೋಮವಾರ ಸಲ್ಲಿಸಿದರು.

ಪ್ರಮುಖರಾದ ಜಯ ಪೂಜಾರಿ, ನಿತ್ಯಾನಂದ ಚಾಂತಾರು, ಭರತ್ ಬಿರ್ತಿ , ಶಶಿಕಾಂತ್ ಕುಂಜಾಲು, ಶಶಿಧರ್ ಬಿರ್ತಿ , ರವಿರಾಜ್, ಸುಂದರ್ ಬ್ರಹ್ಮಾವರ , ಉದಯ ಬ್ರಹ್ಮಾವರ ನಿಯೋಗದಲ್ಲಿದ್ದರು.


Advertisement. Scroll to continue reading.

In this article:Diksoochi news, diksoochi Tv, diksoochi udupi, ShriVeerabhadra temple Brahmavara
Click to comment

































