ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಯೇಸುಕ್ರಿಸ್ತರ ಮರಣ ಹಾಗೂ ಪುನರುತ್ಥಾನದ ದಿನಾಚರಣೆಯ ಸಿದ್ಧತೆಯಾಗಿ ಇಂದು ವಿಶ್ವದಾದ್ಯಂತ ಕ್ರೈಸ್ತ ಭಕ್ತರು ಗರಿಗಳ ಭಾನುವಾರ ವನ್ನು ಬಾರಕೂರಿನ ಸಂತ ಪೀಟರ್ ಚರ್ಚ್ ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊರವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಸಂದೇಶವನ್ನು ನೀಡಿ ನೆರೆದ ಭಕ್ತರನ್ನು ಆಶೀರ್ವದಿಸಿ ಮಾತನಾಡಿ ಕ್ರಿಸ್ತರ ಸಂದೇಶವನ್ನು ನಾವು ಪಾಲನೆ ಮಾಡೋಣ ಪುನರುಥ್ಥಾನದ ಈ ದಿನದಿಂದ ಜಗತ್ತಿನ ಜನರಿಗೆ ಶುಭದಿನಗಳ ಬರಲಿ ಎಂದರು.

ಚರ್ಚ್ ಬಳಿಯಿಂದ ನೂರಾರು ಕ್ರೈಸ್ತ ಬಾಂಧವರ ಮೆರವಣಿಗೆಯೊಂದಿಗೆ ದೇವಾಲಯ ಪ್ರವೇಶ ಹಾಗೂ ಇತರ ಧಾರ್ಮಿಕ ವಿಧಿಗಳೊಂದಿಗೆ ಬಲಿಪೂಜೆಯನ್ನು ನೆರವೇರಿಸಲಾಯಿತು.
ಸ್ಥಳೀಯ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಿಲಿಪ್ ನೇರಿ ಆರಾನ್ಹಾ ಮತ್ತು ಬ್ರಹ್ಮಾವರದ ಧರ್ಮಗುರುಗಳಾದ ವಂದನೀಯ ಚಾಲ್ರ್ಸ್ ಸಲ್ಡಾನ್ಹಾರವರು ಭಾಗವಹಿಸಿದರು.
ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆರಾಲ್ಡ್ ಡಿಸೋಜಾ ಮೆರವಣಿಗೆಯ ನೇತೃತ್ವವನ್ನು ವಹಿಸಿದ್ದರು.

ಬಲಿಪೂಜೆಯ ಸಮಯದಲ್ಲಿ ಜನರಿಂದ ಸ್ವೀಕರಿಸಲ್ಪಟ್ಟ ಕಾಣಿಕೆಗಳ ಮೆರವಣಿಗೆಯನ್ನು ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ವಿವೆಟ್ ಲುವಿಸ್ ಮತ್ತು ಗುರಿಕಾರರು ವಹಿಸಿದ್ದರು.

ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ಎರಿಕ್ ಸೋನ್ಸ್, ಜೆರಾಲ್ಡ್ ಗೊನ್ಸಾಲ್ವಿಸ್, ಶೈಲಾ ಡಿಸೋಜಾ, ಪ್ರವೀಣ್ ಕರ್ವಾಲ್ಲೊ, ಆಲಿಸ್ ಡಿಸೋಜಾ ಮತ್ತಿತರು ಸಹಕರಿಸಿದರು.



































