Connect with us

Hi, what are you looking for?

Diksoochi News

ರಾಜ್ಯ

ಪಾವಗಡದ ಏಷ್ಯಾದ ಅತಿದೊಡ್ಡ
ಸೋಲಾರ್ ಘಟಕಕ್ಕೆ ಬೆಂಕಿ

0

ತುಮಕೂರು: ಏಷ್ಯಾದ ಅತಿದೊಡ್ಡ ಸೋಲಾರ್ ಘಟಕಗಳಲ್ಲಿ ಒಂದು ಎಂಬುದಾಗಿ ಕರೆಸಿಕೊಂಡಿರುವ ಪಾವಗಡದ ಸೋಲಾರ್ ಘಟಕಕ್ಕೆ ಬೆಂಕಿ ತಗುಲಿರುವ ಘಟನೆ ಇಂದು ನಡೆದಿದೆ.

ಪಾರ್ಕ್ ನ ಒಣಹುಲ್ಲಿಗೆ ಬಿದ್ದಂತ ಬೆಂಕಿ, ಕ್ಷಣಾರ್ಧದಲ್ಲಿ ಸೋಲಾರ್ ಘಟಕಕ್ಕೂ ವ್ಯಾಪಿಸಿದ ಪರಿಣಾಮ, 70 ಎಕರೆಯಲ್ಲಿದ್ದಂತ ಕೇಬಲ್ ವೈಯರ್ ಸೇರಿದಂತೆ ವಿವಿಧ ಸಾಮಗ್ರಿಗಳು ಸುಟ್ಟು ಬೂದಿಯಾಗಿದೆ.

ಸೋಲಾರ್ ಘಟಕಕ್ಕೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ನೆರವಾಗಿದ್ದಾರೆ. ಈ ಪರಿಣಾಮ ಇನ್ನೂ ಬೆಂಕಿಯಿಂದ ಮುಂದೆ ಆಗಲಿದ್ದಂತ ಮತ್ತಷ್ಟು ಅನಾಹುತ ತಪ್ಪಿದಂತಾಗಿದೆ ಎನ್ನಲಾಗಿದೆ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. 

Advertisement. Scroll to continue reading.

ಪಾವಗಡದಲ್ಲಿ ಏಷ್ಯಾದಲ್ಲಿಯೇ ಅತಿದೊಡ್ಡ ಸೋಲಾರ್ ಘಟಕ ನಿರ್ಮಾಣವಾಗಿತ್ತು. ಈ ಘಟಕವನ್ನು ಆಂಧ್ರಪ್ರದೇಶ ಮೂಲಕ ಸಿದ್ಧಾರ್ಥ ಸಂಸ್ಥೆಯ ನಿರ್ವಹಣೆ ಮಾಡುತ್ತಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!