Connect with us

Hi, what are you looking for?

Diksoochi News

ರಾಷ್ಟ್ರೀಯ

ಬೀದಿ ಬದಿ ವ್ಯಾಪಾರಿಗಳು ಸರಕು ಸರಂಜಾಮುಗಳನ್ನು ರಾತ್ರಿಯಿಡೀ ಬೀದಿ ಬದಿ ಬಿಡುವಂತಿಲ್ಲ : ಸುಪ್ರೀಂಕೋರ್ಟ್

2

ನವದೆಹಲಿ : ಬೀದಿ ಬದಿ ವ್ಯಾಪಾರಿಗಳು ತಾವು ಕೆಲಸ ಮಾಡುವ ರಸ್ತೆ ಬದಿಯಲ್ಲಿ ರಾತ್ರಿಯಿಡೀ ತಮ್ಮ ಸರಕು-ಸರಂಜಾಮುಗಳನ್ನು ಇರಿಸುವ ಹಕ್ಕನ್ನು ಹೊಂದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯ ಮಂಡಿಸಿದೆ.

ತಾವು ವ್ಯಾಪಾರ ಮಾಡುವ ಸ್ಥಳದಲ್ಲಿ ತಮ್ಮ ಸರಕು-ಸರಂಜಾಮುಗಳನ್ನು ರಾತ್ರಿಯಿಡೀ ಇರಿಸುವ ಹಕ್ಕನ್ನು ಬೀದಿ ಬದಿ ವ್ಯಾಪಾರಿಗಳು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Advertisement. Scroll to continue reading.

ಬೀದಿಬದಿ ವ್ಯಾಪಾರ ನೀತಿಯ ಭಾಗವಾಗಿ ಮಾರುಕಟ್ಟೆಯಲ್ಲಿ ತಮ್ಮ ಸರಕು-ಸರಂಜಾಮುಗಳನ್ನ ಇಡಲು ಬೀದಿಬದಿ ವ್ಯಾಪಾರಿಗಳಿಗೆ ಅನುಮತಿಸಬಹುದಾಗಿದೆ. ಇದನ್ನ ಮೀರಿ ಅನುಮತಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!