ಹಿರಿಯಡಕ : ಮಹತೋಭಾರ ಶ್ರೀವೀರಭದ್ರ ದೇವಸ್ಥಾನ : ವಾರ್ಷಿಕ ಜಾತ್ರಾ ಮಹೋತ್ಸವ; ಧ್ವಜಾರೋಹಣ
Published
2
ಹಿರಿಯಡಕ : ಮಹತೋಭಾರ ಶ್ರೀವೀರಭದ್ರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಧ್ವಜಾರೋಹಣ ನಡೆಯಿತು.
ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಶ್ರೀ ದೇವರ ಬಲಿ ಉತ್ಸವದ ಬಳಿಕ, ಧ್ವಜಸ್ತಂಭ ಪೂಜೆ ನಡೆದು, ಧ್ವಜಾರೋಹಣ ನೆರವೇರಿಸಲಾಯಿತು. ನೂರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.
ಇಂದು ಸಿರಿ ಜಾತ್ರೆ ನಡೆಯಲಿದ್ದು, ಏಪ್ರಿಲ್ 21 ರ ವರೆಗೆ ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.