ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ವತಿಯಿಂದ ನಮ್ಮ ಗ್ರಂಥಾಲಯ ತರಬೇತಿ ಕಾರ್ಯಾಗಾರ ಇಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ರಜತಾದ್ರಿ ಮಣಿಪಾಲದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಂಥಪಾಲಕರಿಗೆ ಕಾರ್ಯಗಾರ ಆಯೋಜಿಸಿದ್ದು, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮರಾವ್ ಉದ್ಘಾಟಿಸಿ ಉಡುಪಿ ಜಿಲ್ಲೆಯಲ್ಲಿ ಗ್ರಂಥಾಲಯ ಕ್ಷೇತ್ರದಲ್ಲಿ ಈಗಾಗಲೇ ಮಾದರಿ ಕೆಲಸಗಳು ಆಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಂಥಾಲಯಗಳೇ ಡಾ.ಅಂಬೇಡ್ಕರ್ ಸ್ವಾಮಿ ವಿವೇಕಾನಂದ ರಂತಹ ಮಹಾನ್ ವ್ಯಕ್ತಿಗಳನ್ನು ರೂಪಿಸಿರುವುದು ಗ್ರಂಥಾಲಯಗಳ ಮೂಲಕ ಇನ್ನಷ್ಟು ಮಹಾನ್ ವ್ಯಕ್ತಿಗಳನ್ನು ಸೃಷ್ಟಿಸುವಂಥ ಆಗಲಿ ಆಗಲಿ ಎಂದು ಶುಭ ಹಾರೈಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಪ್ರಾಸ್ತಾವಿಕ ಮಾತುಗಳನ್ನಾಡಿ, ಗ್ರಂಥಾಲಯಗಳು ಶೈಕ್ಷಣಿಕ ಮಾಹಿತಿ ಕೇಂದ್ರಗಳಾಗಿ ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಮಾಹಿತಿ ಕೇಂದ್ರಗಳಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರವಾಗಿ ವಿವಿಧ ಸ್ಪರ್ಧೆಗಳು ಮತ್ತು ನಿರಂತರ ಕಾರ್ಯಚಟುವಟಿಕೆಯನ್ನು ಮಾಡುವ ಮೂಲಕ ಜ್ಞಾನ ಕೇಂದ್ರವಾಗಿ ಮಾರ್ಪಾಡಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಉಮಾ ಮಹದೇವನ್ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲಾಗಿದೆ. ಜನರು ಕೇವಲ ಮೊಬೈಲ್, ಕಂಪ್ಯೂಟರ್ ಟಿವಿಗಳನ್ನು ಅಷ್ಟೇ ಬಳಸುತ್ತಿದ್ದು ಪುಸ್ತಕ ಓದುಗರು ಕಡಿಮೆಯಾಗಿದ್ದಾರೆ ಎನ್ನುವ ಅಭಿಪ್ರಾಯ ತಪ್ಪಾಗಿದ್ದು, ಉತ್ತಮ ರೀತಿಯಲ್ಲಿ ನಡೆಸಲಾಗುವ ಗ್ರಂಥಾಲಯಗಳಲ್ಲಿ ಜನರು ಓದುವ ಹಂಬಲ ಹೊಂದಿದ್ದಾರೆ ಎಂದು ಸಂದೇಶ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಬ್ದುಲ್ ಅಜೀಜ್ ಮುಲ್ಲಾ ನಿರ್ದೇಶಕರು ತರಬೇತಿ ಪ್ರಕಟಣೆ ಮೇಲ್ವಿಚಾರಣೆ ಕೇಂದ್ರ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗದಗ ಇವರು ಗ್ರಂಥಾಲಯ ನಿರ್ವಹಣೆ ಕುರಿತು ತರಬೇತಿಗಳ ಅಗತ್ಯ ಮತ್ತು ಮಹತ್ವದ ಬಗ್ಗೆ ವಿಶ್ಲೇಷಣೆ ಕುರಿತು ಮಾಹಿತಿ ನೀಡಿದರು.
ಭಾರ್ಗವ ಎಚ್. ಕೆ. ಜಾಯಿಂಟ್ ಪ್ಲೇಸ್ಮೆಂಟ್ ಆಫೀಸರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಇವರು ಗ್ರಂಥಾಲಯ ನಿರ್ವಹಣೆಯಲ್ಲಿ ಸಂವಹನ ಕೌಶಲ್ಯದ ಮಹತ್ವ ಕುರಿತು ಮಾಹಿತಿ ನೀಡಿದರು.

ಅಭಿಷೇಕ್ ಸಂಯೋಜಕರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರು ಬೆಸ್ಟ್ ಪ್ರಾಕ್ಟೀಸಸ್ ಉತ್ತಮ ಗ್ರಂಥಾಲಯಗಳ ಮಾದರಿ ವಿಶ್ಲೇಷಣೆ ಬಗ್ಗೆ ಮಾಹಿತಿ ನೀಡಿದರು. ಬಾಬು ಎಂ. ಯೋಜನಾ ನಿರ್ದೇಶಕರು ಇವರು ಗ್ರಾಮ ಪಂಚಾಯತ್ ನ ಸಾಮಾನ್ಯ ಪ್ರಕ್ರಿಯೆ ಗಳೊಂದಿಗೆ ಗ್ರಂಥಾಲಯ ನಿರ್ವಹಣೆ ಸುತ್ತೋಲೆ ಮಾಹಿತಿ ಕೇಂದ್ರ ಪುಸ್ತಕಗಳ ನೊಂದಣಿ ಈ ಬಗ್ಗೆ ಮಾಹಿತಿ ನೀಡಿದರು.
ಜಯಶ್ರೀ ಜಿಲ್ಲಾ ಗ್ರಂಥಾಲಯಾಧಿಕಾರಿ ಡಿಜಿಟಲ್ ಗ್ರಂಥಾಲಯ ನಿರ್ವಹಣೆ ಮತ್ತು ಪರಿಕರಗಳ ಬಳಕೆ ಕುರಿತು ಮಾಹಿತಿ ನೀಡಿದರು. ಕೃಪಾ ಭಟ್ ಸಂಯೋಜಕರು ನಮ್ಮ ಭೂಮಿ ಹಟ್ಟಿಯಂಗಡಿ ಇವರು ಕ್ರಿಯೇಟಿವ್ ಚೈಲ್ಡ್ ಫ್ರೆಂಡ್ಲಿ ಕ್ರಿಯೇಟಿವ್ ಸ್ಪೇಸ್ ಕುರಿತು ವಿಶ್ಲೇಷಿಸಿದರು.ರೀನಾ ಹೆಗ್ಡೆ ಡಿಜಿಟಲ್ ಗ್ರಂಥಾಲಯ ಪರಿಕಲ್ಪನೆ ಮತ್ತು ಕ್ರಿಯಾತ್ಮಕ ಅನುಷ್ಠಾನ ಕುರಿತು ಮಾಹಿತಿ ನೀಡಿದರು. ಜೇಮ್ಸ್ ಡಿಸಿಲ್ವಾ ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್ ಸ್ವಾಗತಿಸಿ, ಮಹೇಶ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಡೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



































