Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ ನಲ್ಲಿ ಮತ್ತೊಂದು ಆತ್ಮಹತ್ಯೆ!

3

ಉಡುಪಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಲಾಡ್ಜ್‌ ನಲ್ಲಿ ಇಂದು ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಣಾಜೆಯ ಶರಣ್ ರಾಜ್ (31) ಆತ್ಮಹತ್ಯೆ ಮಾಡಿಕೊಂಡವನು. ಈತ ಮಂಗಳೂರಿನ ಮೆಡಿಕಲ್ ರೆಪ್ ಎಂದು ತಿಳಿದು ಬಂದಿದೆ.

ಸಂತೋಷ್‌ ಸಾವನ್ನಪ್ಪಿದ ಶಾಂಭವಿ ಲಾಡ್ಜ್ ನ ಹೆಸರನ್ನು ಮಾಲಕರು ಬದಲಾಯಿಸಿದ್ದು, ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಒಂದು ರೀತಿಯ ಸಂಚಲನ ಸೃಷ್ಟಿ ಮಾಡಿದ್ದ ಈ ಪ್ರಕರಣದಿಂದ ಲಾಡ್ಜ್ ನ ಹೆಸರಿಗೆ ಧಕ್ಕೆಯಾಗಿತ್ತು. ಹೀಗಾಗಿ ಎರಡು ದಿನದ ಹಿಂದಷ್ಟೇ ಈ ಲಾಡ್ಜ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಹೆಸರು ಬದಲಾಯಿಸಲಾಗಿತ್ತು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!