ಕ್ರೀಡೆ : ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಟ್ರಿನಿಡಾಡಿಯನ್ ಕ್ರಿಕೆಟಿಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
‘ನಾನು ಎಲ್ಲಾ ಆಯ್ಕೆಗಾರರಿಗೆ ಮ್ಯಾನೇಜ್‌ಮೆಂಟ್ ತಂಡಗಳಿಗೆ ವಿಶೇಷವಾಗಿ ಕೋಚ್ ಫಿಲ್ ಸೈಮನ್ಸ್‌ಗೆ ಆಭಾರಿಯಾಗಿದ್ದೇನೆ. ಕೋಚ್ ಸೈಮನ್ಸ್ ಅವರು ನನ್ನಲ್ಲಿರುವ ಸಾಮರ್ಥ್ಯವನ್ನು ಗುರುತಿಸಿದರು. ನನ್ನ ವೃತ್ತಿ ಜೀವನದುದ್ದಕ್ಕೂ ನನ್ನ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕೂಡ ನನ್ನ ಮೇಲೆ ದೊಡ್ಡ ಪ್ರಮಾಣದ ನಂಬಿಕೆಯಿಟ್ಟು ನನಗೆ ನಾಯಕತ್ವದ ಜವಾಬ್ಧಾರಿ ನೀಡಿದೆ”
ಆ ಕಾರಣದಿಂದಾಗಿಯೇ ನಾನು ನಾಯಕತ್ವವನ್ನು ವಹಿಸಿಕೊಂಡಿದ್ದೆ. ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಅಧ್ಯಕ್ಷ ರಿಕಿ ಸ್ಕೆರಿಟ್ ಅವರಿಗೆ ನನ್ನ ಅನಂತ ಧನ್ಯವಾದವನ್ನು ತಿಳಿಸುತ್ತೇನೆ. ನನ್ನ ನಾಯಕತ್ವದ ಅವಧಿಯಲ್ಲಿ ಅವರಿಂದ ದೊರೆತ ಬೆಂಬಲಕ್ಕೆ ನಾನು ಸದಾ ಋಣಿಯಾಗಿರುತ್ತೇನೆ” ಎಂದು ಕೀರನ್ ಪೊಲಾರ್ಡ್ ಬರೆದುಕೊಂಡಿದ್ದಾರೆ.

ಪೊಲಾರ್ಡ್ 123 ಏಕದಿನ ಮತ್ತು 101 ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಪ್ರತಿನಿಧಿಸಿದ್ದಾರೆ. ಪ್ರಸ್ತುತ ಪೊಲಾರ್ಡ್ ಐಪಿಎಲ್ ನಲ್ಲಿ ಮುಂಬೈ ತಂಡದಲ್ಲಿ ಆಡುತ್ತಿದ್ದಾರೆ.
