ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಸಾಗುವಾನಿ ಮರದ ಹಲಗೆಯ ಮೇಲೆ ಸುಮಾರು ೧೪೦೦ ಅರ್ಧ ಇಂಚಿವ ಮೊಳೆ ಹಾಗೂ ಬಣ್ಣದ ದಾರ ಬಳಸಿ ಮೂರು ಅಡಿ ಎತ್ತರದ ಗಣಪತಿಯ ಕಲಾಕೃತಿಯನ್ನು ರಚಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ೨೦೨೨ರಲ್ಲಿ ದಾಖಲಿಸಿದ್ದು, ಇದೀಗ ತನ್ನ ಸಾಧನೆಗೆ ಪ್ರಶಸ್ತಿ ದೊರೆತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ದೇಶದಲ್ಲೇ ಅತೀ ಎತ್ತರದ ತನ್ನ ಸಾಧನೆ ದೇಶದಲ್ಲೆ ಪ್ರಥಮ ಎಂದು ಗುರುತಿಸಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ ಎಂದು ಸಾಧಕಿ ಹೆಬ್ರಿ ಗುಳಿಬೆಟ್ಟಿ ಕು.ರಂಜಿತಾ ಹೇಳಿದರು.
ಅವರು ಹೆಬ್ರಿಯ ಶೀಲಾ ಸುಭೋದ್ ಬಲ್ಲಾಳ್ ಬಂಟರ ಯಾನೆ ನಾಡವರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತನ್ನ ಸಾಧನೆಯ ಮಾಹಿತಿ ನೀಡಿದರು.

ಯಾವೂದೇ ಮೆಷಿನ್ ಬಳಸದೆ ಕೈಯಲ್ಲೇ ಕಲಾಕೃತಿ ರಚನೆ ಮಾಡುವ ತನ್ನ ಸಾಧನೆಗೆ ಹೆಬ್ರಿಯ ಕಾಷ್ಠಶಿಲ್ಪಿ ಎಚ್.ರಮೇಶ ಆಚಾರ್ಯ ಮತ್ತು ಮೆಂಟರ್ ತಿಲಕ್ ಮತ್ತು ಹೆಬ್ರಿ ಎಪಿಎಂ ಸಮೂಹ ಸಂಸ್ಥೆಯ ಪ್ರವೀಣ್ ಬಲ್ಲಾಳ್ ಅವರ ವಿಶೇಷ ಸಹಕಾರ ನೀಡಿದ್ದಾರೆ. ಅವರ ಸಹಕಾರವೇ ಸಾಧನೆ ಕಾರಣವಾಗಿದೆ ಎಂದು ರಂಜಿತಾ ಕೃತಜ್ಞತೆ ಸಲ್ಲಿಸಿದರು.

ಮುಂದೆ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಿಸಲು ಪೂರ್ವ ಸಿದ್ಧತೆ ನಡೆಸುತ್ತಿದ್ದು ಎಲ್ಲರ ಸಹಕಾರ ಕೋರಿದರು.
ನನ್ನ ತಂದೆ ಪಿಟ್ಟರ್ ರಘುರಾಮ ದೇವಾಡಿಗ ಮತ್ತು ಪ್ರಮೀಳ ಅವರ ವಿಶೇಷ ಪ್ರೋತ್ಸಾಹ ಮತ್ತು ಸಹಕಾರದಿಂದ ಇನ್ನಷ್ಟು ಸಾಧನೆಗೆ ಸಾಧ್ಯವಾಗಿದೆ ಎಂದು ರಂಜಿತಾ ಖುಷಿಯಿಂದ ಹೇಳಿದರು.
ಇದೇ ೨೩ ರಂದು ರಂಜಿತಾ ಗೆ ಸಾರ್ವಜನಿಕ ಸನ್ಮಾನ : ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿರುವ ಕು.ರಂಜಿತಾ ಅವರಿಗೆ ಹೆಬ್ರಿಯ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ಇದೇ ೨೩ರಂದು ಶನಿವಾರ ೧೦:೩೦ಕ್ಕೆ ಸಾರ್ವಜನಿಕ ಸನ್ಮಾನ ನಡೆಯಲಿದ್ದು ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ ಸನ್ಮಾನ ನೆರವೇರಿಸುವರು. ಹೆಬ್ರಿ ಪ್ರವೀಣ್ ಬಲ್ಲಾಳ್, ಪಂಚಾಯಿತಿ ಅಧ್ಯಕ್ಷೆ ಮಾಲತಿ, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಗಣ್ಯರು ಭಾಗವಹಿಸುವರು ಎಂದು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನ ಟಿ.ಜಿ.ಆಚಾರ್ಯ ತಿಳಿಸಿದರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ನ ಪೂರ್ವಾಧ್ಯಕ್ಷ ರಮೇಶ ಆಚಾರ್ಯ, ಹೆಬ್ರಿ ಬಂಟರ ಸೌಹಾರ್ದ ಸಹಕಾರಿಯ ನಿರ್ದೇಶಕ ಸುಕೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



































