Connect with us

Hi, what are you looking for?

Diksoochi News

ಸಾಹಿತ್ಯ

ಉಡುಪಿ : ವಾಸಂತಿ ಅಂಬಲಪಾಡಿ ಅವರ ‘ವಸುಮಿತ್ರೆ ಕೇಳು’ ಅಬಾಬಿ ಸಂಕಲನ ಬಿಡುಗಡೆ

1

ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಉಡುಪಿ ಜಿಲ್ಲಾ ತಾಲೂಕು ಘಟಕದ ಸಹಯೋಗದಲ್ಲಿ ವಾಸಂತಿ ಅಂಬಲಪಾಡಿ ಅವರ ‘ವಸುಮಿತ್ರೆ ಕೇಳು’ ಅಬಾಬಿ ಸಂಕಲನ ಮತ್ತು ಯುವಕಥಾಗೋಷ್ಠಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಆಭರಣ ಮಳಿಗೆಯಲ್ಲಿ ನಡೆಯಿತು.
ಗೋವಾದ ಖ್ಯಾತ ಉದ್ಯಮಿ ಗೋಪಾಲ ಬಂಗೇರ ಪುಸ್ತಕ ಬಿಡುಗಡೆಗೊಳಿಸಿದರು.

ಸಂದರ್ಭ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಕವನ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ವಹಿಸಿದ್ದರು.


ಈ ಸಂದರ್ಭದಲ್ಲಿ ಮಣಿಪುರ ಜತ್ತನ್ ಮೂಲಸ್ಥಾನದ ಗೌರವ ಅಧ್ಯಕ್ಷೆ ಸುಲೋಚನಾ ಗೋಪಾಲ ಬಂಗೇರ, ಸಾಹಿತಿ ಪೂರ್ಣಿಮಾ ಸುರೇಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಸಂಚಾಲಕ ರಾಮಕೃಷ್ಣ ಶಿರೂರ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ ಶಾಖಾ ಮುಖ್ಯಸ್ಥ ರಫೀಜ್ ರೆಹಮಾನ್ ಅಡ್ಯಾರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ, ರಾಜ್ಯಾಧ್ಯಕ್ಷೆ ಶಾಲಿನಿ ರುದ್ರಮುನಿ, ಜಿಲ್ಲಾಧ್ಯಕ್ಷೆ ವಾಸಂತಿ ಅಂಬಲಪಾಡಿ, ತಾಲೂಕು ಅಧ್ಯಕ್ಷೆ ಅಮೃತಾ ಸಂದೀಪ್ ಉಪಸ್ಥಿತರಿದ್ದರು.

ತಾಲೂಕು ಘಟಕದ ಕಾರ್ಯದರ್ಶಿ ಸುಮಾ ಕಿರಣ್ ಕೃತಿ ಪರಿಚಯ ಮಾಡಿದರು. ರಮ್ಯಾ ಆರ್. ಸ್ವಾಗತಿಸಿದರು. ಅನಿತಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.ಸೌಧಾಮಿನಿ ರಾವ್ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!