ಬೆಳ್ಳಂಪಳ್ಳಿ : ಇಲ್ಲಿನ ಭೂತರಾಜ ಸನ್ನಿಧಿಯ ಸಮೀಪ ಈ ಹಿಂದೆ ಕಂಡುಬಂದಂತೆ, ಅನತಿ ದೂರದ ನೇರ ಮಾರ್ಗದಲ್ಲಿಯೇ ಇರುವ ಬೆಳ್ಳಂಪಳ್ಳಿಯ ನಡುಮನೆ ಆಶಾಲತಾ ದಿವಾಕರ ಶೆಟ್ಟಿಯವರ
ಬೆಟ್ಟು ಗದ್ದೆಯಲ್ಲಿ ಗುಹ ಸಮಾಧಿಯೊಂದು ಇರುವ ಕುರುಹು ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಶಿರ್ವ ಸುಂದರಾಂ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪ್ರಾಚ್ಯ ವಸ್ತು ಸಂಶೋಧಕ, ಪ್ರಾಧ್ಯಾಪಕ ಪ್ರೊಫೆಸರ್ ಟಿ. ಮುರುಗೇಶಿ ಗುಹಾ ಸಮಾಧಿಯ ಇರುವ ಸ್ಥಳಕ್ಕೆಭೇಟಿ ನೀಡಿ, ಈ ಭಾಗದಲ್ಲಿರುವ ಎರಡು ಗುಹಾ ಸಮಾಧಿ ಎಂಬುದನ್ನು ಖಚಿತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಗುಹಾಸಮಾಧಿಯ ಉತ್ಖನನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಗದ್ದೆಯ ಮಾಲೀಕರಾದ ಆಶಾಲತಾ ದಿವಾಕರ್ ಶೆಟ್ಟಿಯವರು, ಗದ್ದೆಯಲ್ಲಿ ಕೃಷಿ ಮಾಡಲು ನೀರನ್ನು ಹಾಯಿಸಿದಾಗ ಈ ಗದ್ದೆಯಲ್ಲಿ ತುಂಬಿದಷ್ಟು ನೀರು ಈ ಗದ್ದೆಯಲ್ಲಿರುವ ಹೊಂಡಗಳಲ್ಲಿ ಹೋಗುತ್ತದೆ. ನಮ್ಮ ಬೆಟ್ಟು ಗದ್ದೆ ಖಾಲಿಯಾಗುತ್ತಿತ್ತು. ನಾವು ಸುತ್ತಲೂ ಮನೆಯ ಹಂಚನ್ನು ತಡೆಗೋಡೆಯಂತೆ ಇಟ್ಟು ನೀರು ಹರಿಯದಂತೆ ಮಾಡಿದ್ದೇವೆ. ಆದರೂ ಕೂಡ ನೀರು ಮಾತ್ರ ಎಲ್ಲಿಗೆ ಹೋಗುತ್ತದೆ ಎಂದು ತಿಳಿಯಲಾಗದು. ನಮಗೆ ಕೃಷಿ ಮಾಡಲು ಬೆಟ್ಟು ಗದ್ದೆಯಲ್ಲಿ ನೀರು ನಿಲ್ಲಿಸಲು ಆಗುತ್ತಿರಲಿಲ್ಲ. ಐದಾರು ಗದ್ದೆ ಆಚೆಯ ಕೆಳಭಾಗದಲ್ಲಿರುವ ಗದ್ದೆಯಲ್ಲಿ ಕೆಸರಿನಿಂದ ಕೂಡಿದ ನೀರು ಗದ್ದೆಯಲ್ಲಿ ಕಾಣ ಸಿಗುತ್ತಿತ್ತು. ಕೆಳಗಿನ ಗದ್ದೆಯಲ್ಲಿ ನೀರು ಭೂಮಿಯ ಒಳಭಾಗದಲ್ಲಿ ಸಂಚರಿಸುತ್ತದೆ. ಈ ನೀರಿನ ಬಣ್ಣ ಕೆಸರಿನಿಂದ ಕೂಡಿರುತ್ತದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಹೊಸ ಈ ಗುಹಾಸಮಾಧಿಯ ಆನತಿದೂರದಲ್ಲಿ ನಾಗಬನ ಇದೆ. ಹಾಗೆಯೇ ಬೆಳ್ಳಂಪಳ್ಳಿಯ ಭೂತರಾಜರ ಸನ್ನಿಧಿಯ ಎದುರೇ ಈ ಹಿಂದೆ ಕಾಂಕ್ರೀಟ್ ರಸ್ತೆ ಆಗುತ್ತಿರುವಾಗ ಭಾರವಾದ ಸಿಮೆಂಟಿನ ಲಾರಿ ಚಲಿಸಿ ಕುಸಿದ ಚಪ್ಪಡಿಯಿಂದ ವೃತ್ತಾಕಾರದ ಹೊಂಡ ಕಾಣಿಸಿಕೊಂಡಿದ್ದು, ಅಲ್ಲಿ ಕಾಮಗಾರಿ ನಡೆಸದೆ, ಆ ಪ್ರದೇಶವನ್ನುರಕ್ಷಣೆ ಮಾಡಲಾಗಿದೆ. ಅಲ್ಲಿಯೂ ಕೂಡ ಪಕ್ಕದಲ್ಲಿಯೇ ನಾಗವನ ಇದೆ ಎಂದು ಭೂತರಾಜ ಸನ್ನಿಧಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ತಿಳಿಸಿದ್ದಾರೆ.


ಸಂಶೋಧಕರಾದ ಪ್ರೊಫೆಸರ್ ಟಿ ಮುರುಗೇಶಿ ಅವರು ಅದನ್ನು ಪರಿಶೀಲಿಸಿ, ಈ ಭಾಗದಲ್ಲಿ ಆಶಾಲತಾ ದಿವಾಕರ್ ಶೆಟ್ಟಿ ಅವರ ಗದ್ದೆಯಲ್ಲಿ ಪತ್ತೆಯಾಗಿರುವುದು ಎರಡನೇ ಗುಹಾ ಸಮಾಧಿಯಾಗಿದೆ ಎಂದು ತಿಳಿಸಿದ್ದಾರೆ. ಈ ಭಾಗದಲ್ಲಿ ಭೂತ ರಾಜನ ಸಾನಿಧ್ಯವನ್ನು ಅಳಿದುಳಿದ ಕುರುಹು ಇರುವುದನ್ನು ಕೂಡ ಪತ್ತೆಹಚ್ಚುವಲ್ಲಿ ಗಣೇಶ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಸಹಕರಿಸಿದ್ದು,
ಇದೀಗ ಭೂತರಾಜರ ಸಾನಿಧ್ಯ ನೂತನವಾಗಿ ಊರ ಪರವೂರ ಭಕ್ತರ ಸಹಕಾರದಿಂದಹೊಸದಾಗಿ ರಚನೆಯಾಗಿದೆ. ಅಂದು ಭೂತರಾಜರ ಸನ್ನಿಧಿಯ ಕುರುಹು ಇದೆಯೆಂದು ಉಡುಪಿಯ ಸೋದೆ ಮಠದ ಶ್ರೀಗಳು ಕೂಡ ಪತ್ರಿಕೆ ವರದಿಯನ್ನು ಆಧರಿಸಿ ಮರುದಿನವೇ ಬೆಳ್ಳಂಪಳ್ಳಿಗೆ ಭೇಟಿ ನೀಡಿದ್ದರು, ಇಂದು ಪ್ರವೀಣ್ ಕುಮಾರ್ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಪ್ರೊಫೆಸರ್ ಟಿ.ಮುರುಗೇಶಿ ಸ್ಥಳೀಯರಾದ ಪ್ರವೀಣ್ ಕುಮಾರ್ ಶೆಟ್ಟಿ, ಬೆಳ್ಳಂಪಳ್ಳಿ, ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು, ಆಶಾಲತ ದಿವಾಕರ್ ಶೆಟ್ಟಿ ಜೊತೆಗಿದ್ದು ಸಹಕರಿಸಿದ್ದಾರೆ.
ಸ್ಥಳೀಯವಾಗಿ ಭೂಪ್ರದೇಶದ ಹೆಚ್ಚಿನ ಮಾಹಿತಿಯನ್ನು ತಿಳಿಹೇಳಲು ಸಂಶೋಧಕರೊಂದಿಗೆ ಸಹಕರಿಸಿ, ಇದೀಗ ಎರಡನೇ ಗುಹಾಸಮಾಧಿ ಪತ್ತೆಯಾಗಿದ್ದು , ಗತವರ್ಷದ ಇತಿಹಾಸ ತಿಳಿಯ ಬಯಸುವ ಯುವ ವಿದ್ಯಾರ್ಥಿಗಳಿಗೂ, ಸಂಶೋಧನಾರ್ಥಿಗಳಿಗೂ ಈ ಭಾಗದ ಪ್ರದೇಶ ಸಂಶೋಧನೆ ಮತ್ತು ಅಧ್ಯಯನಕ್ಕೆ ಪೂರಕವಾಗಿ ಮಾಡಿದಂತಿದೆ ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ

































