Connect with us

Hi, what are you looking for?

Diksoochi News

ಸಿನಿಮಾ

ಕಾಶ್ಮೀರ ಫೈಲ್ಸ್ ಚಿತ್ರದ ಒಟಿಟಿ ಪ್ರೀಮಿಯರ್ ದಿನಾಂಕ ಪ್ರಕಟ

1

ನವದೆಹಲಿ: ಕಾಶ್ಮೀರ ಫೈಲ್ಸ್ ಚಿತ್ರದ ಡಿಜಿಟಲ್ ಪ್ರೀಮಿಯರ್ ಮೇ 13 ರಂದು ಬರಲಿದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ZEE5 ಪ್ರಕಟಿಸಿದೆ.

ದೇಶದಲ್ಲಿ ಸಂಚಲನ ಮೂಡಿಸುದ್ದ ಚಿತ್ರ ಕಾಶ್ಮೀರ್ ಫೈಲ್ಸ್. ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಈ ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಿಸಿದೆ.

ಈ ಚಿತ್ರದಲ್ಲಿ ಹಿರಿಯ ನಟರಾದ ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಹಾಗೂ ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement. Scroll to continue reading.

ಕಾಶ್ಮೀರ ಫೈಲ್ಸ್ ನಮ್ಮ ಜನರೊಂದಿಗೆ ವರ್ಷಗಳ ಹಿಂದೆ ನಡೆದ ಘಟನೆಯ ಚಿತ್ರಣವಾಗಿದೆ ಮತ್ತು ಇನ್ನೂ ಅನೇಕರಿಗೆ ತಿಳಿದಿಲ್ಲ . ಚಿತ್ರವು ರಾಷ್ಟ್ರದಾದ್ಯಂತ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈಗ ಅದನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಸಾಧ್ಯವಾಗದವರಿಗೆ , ಕಾಶ್ಮೀರ ಫೈಲ್‌ ಪ್ರಪಂಚದಾದ್ಯಂತ ZEE5 ನಲ್ಲಿ ಲಭ್ಯವಿರುತ್ತದೆ ಎಂದು ಅನುಪಮ್ ಖೇರ್ ತಿಳಿಸಿದ್ದಾರೆ.

ಕಾಶ್ಮೀರ ಫೈಲ್ಸ್ ಚಿತ್ರವನ್ನು ಭಾರತ ಸೇರಿದಂತೆ ಇತರ ಹಲವು ದೇಶಗಳಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ನೋಡಬಹುದಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!