ಕುಂದಾಪುರ: ಉಯ್ಯಾಲೆ ಆಡುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಬಾಲಕಿ ಸಾವನ್ನಪ್ಪಿರುವ ಘನೆ ಬೀಜಾಡಿ ಗ್ರಾಮದಲ್ಲಿ ನಡೆದಿದೆ.
ಅಶೋಕ್ ಮೆಂಡನ್ ಎಂಬವರ ಪುತ್ರಿ ಪ್ರಾಧಾನ್ಯ(09) ಮೃತ ಬಾಲಕಿ.
ಬೇಸಿಗೆ ರಜೆಯಾದ್ದರಿಂದ ಪ್ರಾಧಾನ್ಯ ಇತರ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಮನೆಯ ಎದುರುಗಡೆ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಕುಳಿತು ಆಟ ಆಡುತ್ತಿದ್ದಳು. ಈ ವೇಳೆ ಸಂತೋಷ್ ಎಂಬಾತ ಕಾರನ್ನು ಹತ್ತಿ ಒಮ್ಮೆಲೇ ನಿರ್ಲಕ್ಷತನದಿಂದ ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿ ಜೋಕಾಲಿ ಆಡುತ್ತಿದ್ದ ಪ್ರಾದಾನ್ಯಳಿಗೆ ಡಿಕ್ಕಿಹೊಡೆದಿದ್ದಾನೆ.
Advertisement. Scroll to continue reading.

ಪರಿಣಾಮ ಪ್ರಾಧಾನ್ಯ ತಲೆಗೆ ತೀವ್ರ ಗಾಯವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































