ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸಮುದ್ರದಲ್ಲಿ ಜೀವನ ಕಂಡುಕೊಳ್ಳುವವರಿಗೆ ದೇವರೆ ಶ್ರೀರಕ್ಷೆ ಅಲ್ಲಿ ಡಾಕ್ಟರ್, ಪೋಲೀಸ್, ಆಸ್ಪತ್ರೆ, ಅಂಬ್ಯೂಲೆನ್ಸ್ ಏನೂ ಇಲ್ಲ ಎಂದು ನಿವೃತ್ತ ಪ್ರಿನ್ಸಿಪಾಲ್ ವಿದ್ಯಾವಂತ ಆಚಾರ್ಯ ಹೇಳಿದರು.

ಶುಕ್ರವಾರ ಶ್ರೀ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆ ಯಲ್ಲಿ 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ತ್ರಿಶಕ್ತಿ ಸ್ವರೂಪಿಣಿ ಇಲ್ಲಿನ ದೇವಿ ಕಡಲ ತಡಿಯ ಜನರನ್ನು ಮತ್ತು ಇಲ್ಲಿನ ಭೂ ಪ್ರದೇಶವನ್ನು ಕಾಪಾಡುವ ಮಹಾ ಮಾತೆ ಎಂದರು.
ಆಡಳಿತ ಮಂಡಳಿಯ ಚಂದ್ರ ಶೇಖರ ಪಠೇಲ್ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಗಣಪತಿ ಖಾರ್ವಿ , ಗಿನ್ನೆಸ್ ದಾಖಲೆಯ ಈಜು ಪಟು ಗೋಪಾಲ್ ಖಾರ್ವಿ , ಮುಳುಗು ತಜ್ಞ ಈಶ್ವರ್ ಮಲ್ಪೆ , ಜಾನಪದ ಕಲಾವಿದ ಸದಾನಂದ ಕುಂದರ್ ಕೋಡಿ ಬೆಂಗ್ರೆ, ನಾನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಜನಾರ್ದನ್ ಗಂಗೊಳ್ಳಿ, ಶ್ರೀಧರ ಖಾರ್ವಿ, ಸತೀಶ್ ಖಾರ್ವಿ, ಪ್ರತಿಕ್ಷಾ, ನಾರಾಯಣ ಮೇಸ್ತ್ರಿಯವರನ್ನು ಸನ್ಮಾನಿಸಲಾಯಿತು.
ಮಹಾಬಲ ತೋಳಾರ್, ಮೀನಾ ಜನಾರ್ದನ್, ಪ್ರಕಾಶ್ ಪಠೇಲ್, ರೇಣುಕಾ ಪಠೇಲ್, ಜಯ ಕುಂದರ್, ಚಂದ್ರ ಕುಂದರ್, ಕೃಷ್ಣ ಅಂಚನ್, ಅರುಣ್ ಕುಮಾರ್ ಉಪಸ್ಥಿತರಿದ್ದರು.

ಸಂದೀಪ್ ಖಾರ್ವಿ ಪ್ರಾಸ್ತಾವಿಕ ಮಾತನಾಡಿ, ಶಯನ್ ಖಾರ್ವಿ ಸ್ವಾಗತಿಸಿ ವಂದಿಸಿ ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

































