Connect with us

Hi, what are you looking for?

Diksoochi News

ರಾಜ್ಯ

ಮೇ 2 ರಂದು ರಂಜಾನ್ ಆಚರಣೆಗೆ ನಿರ್ಧಾರ; ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ

1

ಬೆಂಗಳೂರು: ರಾಜ್ಯ ಸರ್ಕಾರವು ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಈಗ ಬದಲಾವಣೆ ಮಾಡಲಾಗಿದ್ದು, ಮೂನ್ ಕಮಿಟಿ ತೀರ್ಮಾನದಿಂದಾಗಿ ದಿನಾಂಕ 02-05-2022ರಂದು ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಸರ್ಕಾರ ರಂಜಾನ್ ಹಬ್ಬದ ಸಾರ್ವತ್ರಿಕ ರಜೆ ಬದಲಾವಣೆ ಮಾಡಿರುವುದಾಗಿ ಹೇಳಿದೆ. 

ಈ ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು.

ಆದರೆ, ಖುತುಬ್ ಎ ರಂಜಾನ್ ಹಬ್ಬವನ್ನು ದಿನಾಂಕ 02-05-2022 ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 02-05-2022ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!