ವರದಿ: ಬಿ.ಎಸ್.ಆಚಾರ್ಯ
ಬ್ರಹ್ಮಾವರ : ನಾನಾ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಭಾನುವಾರ ಸೌಹಾರ್ದತೆಯ ಮೇ ದಿನಾಚರಣೆ ಬ್ರಹ್ಮಾವರದಲ್ಲಿ ಜರುಗಿತು.
ಇಲ್ಲಿನ ಆಕಾಶವಾಣಿ ವೃತ್ತದ ಬಳಿಯಿಂದ ರಥ ಬೀದಿ ಮೂಲಕ ನಾನಾ ಸಂಘಟನೆಗಳ ಕಾರ್ಮಿಕರು ಮೆರವಣಿಗೆ ಮೂಲಕ ಸಾಗಿ ಬಂದು ಬಳಿಕ ಕಾರ್ಮಿಕ ಕಛೇರಿ ಬಳಿ ಬಹಿರಂಗ ಸಭೆ ಜರುಗಿತು.

ಈ ಸಂದರ್ಭ ಕಾಮ್ರ್ರೇಡ್ ಗೊಡ್ವಿನ್ ಫೆರ್ನಾಡಿಂಸ್ ಮಾತನಾಡಿ, 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಇತರ ಕೆಲಸಕ್ಕಾಗಿ ಒತ್ತಾಯಿಸಿ ವಿಶ್ವ ಮಟ್ಟದಲ್ಲಿ ಇಂದು ಕಾರ್ಮಿಕ ದಿನಾಚರಣೆ ನಡೆಯುತ್ತಿದೆ. ಅದನ್ನು ಕಸಿಯುವ ಪ್ರಯತ್ನ ಎಲ್ಲಾ ಕಡೆಯಲ್ಲಿ ಆಗುತ್ತಿದೆ. ಕಾರ್ಮಿಕರು ಎಚ್ಚೆತ್ತು ಇದರ ವಿರುದ್ಧ ಹೋರಾಡಬೇಕಾಗಿದೆ ಎಂದರು.

ಕಾರ್ಮಿಕ ಮುಖಂಡರುಗಳಾದ ಶಶಿಧರ ಗೊಲ್ಲ , ಶ್ರೀಧರ ಶೆಟ್ಟಿ, ಸುಭಾಷ್ ನಾಯಕ್ , ಅರವಿಂದ ದೇವಾಡಿಗ, ಶಂಕರ ಪೂಜಾರಿ , ಸದಾಶಿವ ಪೂಜಾರಿ, ಕೃಷ್ಣಾನಂದ ನಾಯಕ್ , ಶಂಕರ ಕೆ. ರಾಮ ಕರ್ಕಡ ನೇತೃತ್ವ ವಹಿಸಿದ್ದರು
Advertisement. Scroll to continue reading.



































