Connect with us

Hi, what are you looking for?

Diksoochi News

ಸಿನಿಮಾ

ವಿದೇಶಕ್ಕೆ ಹಾರಲಿದ್ದಾನೆ ಭೋಜರಾಜ್ ಎಂ.ಬಿ.ಬಿ.ಎಸ್

1

ತುಳುನಾಡಿನಲ್ಲಿ 50 ದಿನಕ್ಕೂ ಹೆಚ್ಚು ಪ್ರದರ್ಶನ ಕಂಡ ಈ ವರ್ಷದ ಸೂಪರ್ ಹಿಟ್ ತುಳು ಚಿತ್ರ ಭೋಜರಾಜ್ ಎಂ.ಬಿ.ಬಿ.ಎಸ್ ಮೇ 6 ರಿಂದ ದುಬೈ, ಶಾರ್ಜಾ, ಅಬುದಾಬಿ ಯಲ್ಲಿ ಒಟ್ಟು 6 ಥಿಯೇಟರ್ ಗಳಲ್ಲಿ ತೆರೆಕಾಣಲಿದ್ದು, ಮೇ 20 ರಿಂದ ಕತಾರ್, ಕುವೈತ್, ಬೆಹರೈನ್, ಒಮನ್,ಸೌದಿ ಅರೇಬಿಯಾ ದಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಚಿತ್ರ ತೆರೆಕಂಡ ಎಲ್ಲ ಕಡೆಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು , ಚಿತ್ರದ ಕತೆ,ಹಾಗೂ ಹಾಸ್ಯ,ಹಾಡುಗಳು ಮತ್ತು ಉತ್ತಮ ಸಂದೇಶ ಇದ್ದು , ಮೊದಲ ಬಾರಿಗೆ ಬೋಜರಾಜ್ ವಾಮಂಜೂರು ನಾಯಕ ನಟನಾಗಿ ಕಾಣಿಸಿಕೊಡಿದ್ದು ,ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್ ,ಉಮೇಶ್ ಮಿಜಾರ್,ರವಿ ರಾಮಕುಂಜ, ಶೀತಲ್ ನಾಯಕ್, ನವ್ಯ ಪೂಜಾರಿ ಮೊದಲಾದವರು ಅಭಿನಯಿಸಿದ್ದಾರೆ. ದರ್ಬಾರ್ ಸಿನೆಮಾಸ್ ನಲ್ಲಿ ರಫೀಕ್ ದರ್ಬಾರ್ ನಿರ್ಮಾಣದ ಈ ಚಿತ್ರವನ್ನು ಶ್ರೀಮತಿ ಪ್ರಭಾ ಸುವರ್ಣ ಹಾಗೂ ನಾರಾಯಣ ಪಿ ಸುವರ್ಣ ಅರ್ಪಿಸಿದ್ದಾರೆ.

ಪರ್ವೇಜ್ ಬೆಳ್ಳಾರೆ, ಶರಣ್ ರಾಜ್ ಕಾಸರಗೋಡು ಸಹ ನಿರ್ಮಾಣದ ಈ ಚಿತ್ರಕ್ಕೆ ಇಸ್ಮಾಯಿಲ್ ಮೂಡುಶೆಡ್ಡ ಆಕ್ಷನ್ ಕಟ್ ಹೇಳಿದ್ದಾರೆ, ಲ ತುಳು ನಾಟಕ ಹಾಗೂ ಚಿತ್ರರಂಗದ ದಿಗ್ಗಜರೆನಿಸಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ತುಳು ನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮೂರು ವಿಭಿನ್ನ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಗಲ್ಫ್ ಕಂಟ್ರಿ ಯಲ್ಲಿ ಸೆಂಥಿಲ್ ಬೆಂಗಳೂರು ಬಿಡುಗಡೆ ಮಾಡುತ್ತಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!