ಬೆಂಗಳೂರು : ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯಾದ ಎಸ್.ಎ.ನಾಗಮ್ಮ ಇಂದು (ಮೇ 14) ವಿಧಿವಶರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವತನ್ನು ಕಳೆದುಕೊಂಡ ದುಃಖದ ನಡುವೆ ಮತ್ತೊಂದು ಅಘಾತ ಕುಟುಂಬಕ್ಕೆ ಎದುರಾಗಿದೆ.
81 ವರ್ಷ ವಯಸ್ಸಿನ ನಾಗಮ್ಮ, ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನಗರದ ಬಸವೇಶ್ವರ ನಗರದಲ್ಲಿ ತಮ್ಮ ಮಗನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸಹೋದರಾದ ಎಸ್.ಎ.ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಎಸ್.ಎ.ಶ್ರೀನಿವಾಸ್, ಸಹೋದರಿ ಜಯಮ್ಮ, ಮಗ ಮಹೇಶ್ ರನ್ನ ಎಸ್.ಎ.ನಾಗಮ್ಮ ಅಗಲಿದ್ದಾರೆ
Advertisement. Scroll to continue reading.