Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಇಂದು ಶಾಲಾ ಪ್ರಾರಂಭೋತ್ಸವ; ಮಕ್ಕಳಿಗೆ ಸಂಭ್ರಮದ ಸ್ವಾಗತ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸೋಮವಾರ ಎಲ್ಲೆಡೆಯಲ್ಲಿ ಶಾಲಾ ಆರಂಭಗೊಂಡಿದೆ. ಮಕ್ಕಳು ಅತೀ ಉತ್ಸಾಹದಿಂದ ಶಾಲೆಗೆ ಬಂದು ಸಹಪಾಠಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಸೇರಿಕೊಂಡಿದ್ದಾರೆ.


ಬ್ರಹ್ಮಾವರ ಭಾಗದಲ್ಲಿ ಹಲವಾರು ಶಾಲೆಗಳನ್ನು ತಳಿರು ತೋರಣದಿಂದ ಶೃಂಗರಿಸಿ ಮಕ್ಕಳಿಗೆ ಹೂ ಗೂಚ್ಚ ನೀಡಿ ಬರಮಾಡಿಕೊಂಡಿದ್ದಾರೆ. ಕೆಲವು ದಿನದ ಹಿಂದೆಯೇ ಶಾಲೆಯನ್ನು ಸ್ವಚ್ಛಗೊಳಿಸಿ ಇಡಲಾಗಿತ್ತು. ಗ್ರಾಮೀಣ ಭಾಗದ ಮಕ್ಕಳು ಅತೀ ಲವಲವಿಕೆಯಿಂದ ಇಂದು ಶಾಲೆಗೆ ಬಂದಿದ್ದಾರೆ.

Advertisement. Scroll to continue reading.


ಜಿಲ್ಲೆಯಲ್ಲಿ ಅತೀ ಹೆಚ್ಚು ( 645) ವಿದ್ಯಾರ್ಥಿಗಳನ್ನು ಹೊಂದಿರುವ ಬ್ರಹ್ಮಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಕ್ಕಳನ್ನು ನೊಂದಾಯಿಸಲು ರಕ್ಷಕರು ಸರತಿಯ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.


ಖಾಸಗಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಲಿತ ಮಕ್ಕಳನ್ನು ಕೂಡಾ ಕೆಲವರು ಇಲ್ಲಿಗೆ ನೊಂದಾಯಿಸಲು ಬಂದ ಮಕ್ಕಳ ಪಾಲಕರು ಕೂಡಾ ಇದ್ದಾರೆ.


ಈಗಿರುವ ಮಕ್ಕಳ ಸಂಖ್ಯೆಗೆ ಮತ್ತು ಹೊಸ ಸೇರ್ಪಡೆಗೆ ಇಲ್ಲಿ ತರಗತಿಗಳು ಮತ್ತು ಶಿಕ್ಷಕರ ಕೊರತೆಗೆ ಸರಕಾರಕ್ಕೆ ಜನಪ್ರತಿನಿಧಿಗಳಿಗೆ ಶಾಲಾಭಿವೃದ್ಧಿ ಸಮಿತಿ ಪ್ರಯತ್ನ ಮಾಡುತ್ತಿದೆ.
ಬಹುತೇಕ ಕಡೆಯಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಿಂದ ಶಿಕ್ಷಣ ಪ್ರಮಾಣ ಪತ್ರ ಪಡೆದು ಸರಕಾರಿ ಅಥವಾ ಅನುದಾನಿತ ಅನುದಾನ ರಹಿತ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುವ ಭರಾಟೆ ಕಂಡು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!