ಪರ್ಕಳ : ಎಸ್ . ದಿವಾಕರ್ ಅವರು ಸಣ್ಣ ಕತೆಗಳ ಭಾಷಾಂತರ ಮತ್ತು ಸಂಗೀತ ವಿಮರ್ಶೆಗೆ ನೀಡಿರುವ ಕೊಡುಗೆ ಮಹತ್ವದ್ದು. ಅವರು ಜಗತ್ತಿನ ಹಲವು ಭಾಷೆಗಳ ಸಣ್ಣ ಕತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ತಿಳಿಸಿದರು.
ಅವರು ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ ದಲ್ಲಿ ಭಾನುವಾರ ನಡೆದ ಉಡುಪಿಯ ರಾಗ ಧನ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಡಾ.ಮಹಾಬಲೇಶ್ವರ ರಾವ್, ಎಸ್. ದಿವಾಕರ್ ಅವರ ಸಂಗೀತ ವಿಮರ್ಶೆಯ ಒಳನೋಟಗಳನ್ನು ವಿವರಿಸಿದರು.

ಎಸ್ . ದಿವಾಕರ್ ಅವರು ಕಳಿಸಿದ ಆಡಿಯೋ ಪ್ರತಿಕ್ರಿಯೆಯನ್ನು ಸಭಿಕರು ಆಲಿಸಿದರು. ಅನಂತಪುರ ಶ್ರೀ ಕೃಷ್ಣಯ್ಯ, ಮತ್ತು ರಾಗಧನದ ಅಧ್ಯಕ್ಷ ಡಾ.ಕಿರಣ್ ಹೆಬ್ಬಾರ್ ಅವರು ಈಶ್ವರಯ್ಯರ ಒಡನಾಟದ ಸವಿ ನೆನಪು ವಿವರಿಸಿದರು.

ಸರಿಗಮ ಭಾರತಿಯ ಉಮಾಶಂಕರಿ ಸ್ವಾಗತಿಸಿದರು, ಶಿಲ್ಪಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ಆಚಾರ್ಯ ಧನ್ಯವಾದ ಸಲ್ಲಿಸಿದರು.

ಬಳಿಕ ಬೆಂಗಳೂರಿನ ಅದಿತಿ ಪ್ರಹ್ಲಾದ್ ಅವರ ಸಂಗೀತ ಕಚೇರಿ ನಡೆಯಿತು. ತನ್ಮಯಿ ಉಪ್ಪಂ ಗಳ ವಯೋಲಿನ್ ನಲ್ಲಿ, ಡಾ.ಬಾಲಚಂದ್ರ ಆಚಾರ್ಯ ಮೃದಂಗದಲ್ಲಿ ಸಹಕಾರ ನೀಡಿದರು

































