ಹಿರಿಯಡಕ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಇಲ್ಲಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90.2 ಫಲಿತಾಂಶ ಪಡೆದಿದೆ. ಒಟ್ಟು 174 ವಿದ್ಯಾರ್ಥಿ ಗಳಲ್ಲಿ 157 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 39 ಡಿಸ್ಟಿಂಕ್ಷನ್ ,101 ಪ್ರಥಮ ಶ್ರೇಣಿ,15 ದ್ವಿತೀಯ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ತ್ರತೀಯ ಶ್ರೇಣಿ ಪಡೆದಿರುತ್ತಾರೆ.
ಕನ್ನಡ ಮಾಧ್ಯಮದ ಕುಮಾರಿ ರಶ್ಮಿತಾ ಆರ್. ಪೂಜಾರಿ 621 ಅಂಕ ಗಳಿಸಿದ್ದು, ಆಂಗ್ಲ ಮಾಧ್ಯಮದಲ್ಲಿ 605 ಅಂಕ ಪಡೆದ ಕುಮಾರಿ ಖುಶಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರನ್ನು ಹಾಗೂ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಸಕ ಲಾಲಾಜಿ ಆರ್. ಮೆಂಡನ್ , ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಶ್ವಾಸ ಭಟ್ ಮತ್ತು ಸರ್ವ ಸದಸ್ಯರು, ಪೋಷಕರು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, Karnataka Public school Hiriadka, sslc exam result

Click to comment