ಧಾರವಾಡ : ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಡ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಆರು ಜನರಿಗೆ ಗಂಭೀರ ಗಾಯಗೊಂಡಿದ್ದು, ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿಕೊಂಡು ವಾಹನ ಬರುತ್ತಿತ್ತು ಎನ್ನಲಾಗಿದೆ. ಮನಸೂರ ಗ್ರಾಮದಿಂದ ಬೆನಕನಟ್ಟಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ.
ಬೆನಕಕಟ್ಟೆ ಗ್ರಾಮದ ಅನನ್ಯ (14), ಹರೀಶ್ (13), ಶಿಲ್ಪಾ (34), ನೀಲವ್ವ (60), ಮಧುಶ್ರೀ (20), ಮಹೇಶ್ವರಯ್ಯ (11), ಶಂಭುಲಿಂಗಯ್ಯ (11) ಮೃತಪಟ್ಟವರು.
Advertisement. Scroll to continue reading.

ಘಟನೆಯಿಂದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಬೆನ್ನಲ್ಲೇ ಕ್ರೂಸರ್ ಚಾಲಕ ಪರಾರಿಯಾಗಿದ್ದಾನೆ.
Advertisement. Scroll to continue reading.
