Connect with us

Hi, what are you looking for?

Diksoochi News

ರಾಷ್ಟ್ರೀಯ

ಕೋವಿಡ್ ನಿಂದ ಪತಿ ಸಾವು; ಗ್ಯಾಸ್ ಲೀಕ್ ಮಾಡಿಕೊಂಡು ಪತ್ನಿ, ಮಕ್ಕಳು ಆತ್ಮಹತ್ಯೆ

0

ದೆಹಲಿ: ಸಿಲಿಂಡರ್‌ ಗ್ಯಾಸ್ ಲೀಕ್‌ ಮಾಡಿಕೊಂಡು ಮಹಿಳೆ ಸೇರಿದಂತೆ ಇಬ್ಬರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಮಂಜು ಮತ್ತು ಆಕೆಯ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ.

ಇವರು ಮನೆಯ ಎಲ್ಲಾ ಬಾಗಿಲುಗಳು, ಕಿಟಕಿಗಳನ್ನು ಮುಚ್ಚಿ ನಂತರ ಸಿಲಿಂಡರ್‌ ಗ್ಯಾಸ್ ಲೀಕ್‌ ಮಾಡಿದ್ದು, ಅದರಿಂದ ಹೊರ ಬಂದ ವಿಷಕಾರಿ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ

Advertisement. Scroll to continue reading.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಡೆತ್‌ ನೋಟ್‌ ಸಿಕ್ಕಿದೆ. ʻಕಾರ್ಬನ್ ಮಾನಾಕ್ಸೈಡ್ ತುಂಬಾ ಮಾರಣಾಂತಿಕ ಅನಿಲ. ಇದು ಜೀವಿಗಳನ್ನು ಕೊಲ್ಲುತ್ತದೆ. ಮನೆ ಒಳಗೆ ಬಂದವರು ದಯವಿಟ್ಟು ಮೊದಲು ಕಿಟಕಿ, ಬಾಗಿಲುಗಳನ್ನು ತೆರೆದು ಶುದ್ಧ ಗಾಳಿ ಬರುವಂತೆ ಅವಕಾಶ ಮಾಡಿಕೊಡಿ. ಇಲ್ಲಿ ಯಾರೂ ಕೂಡ ಬೆಂಕಿಕಡ್ಡಿ, ಕ್ಯಾಂಡಲ್ ಬಳಸಬೇಡಿ. ಕೊಠಡಿಯ ಅಪಾಯಕಾರಿ ಗ್ಯಾಸ್‌ ಅನ್ನು ನ್ಹೇಲ್ ಮಾಡಬೇಡಿʼ ಎಂದು ಇಂಗ್ಲಿಷ್‌ನಲ್ಲಿ ಡೆತ್‌ ನೋಟ್‌ನಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯ ಪತಿ ಕಳೆದ ವರ್ಷ ಕೋವಿಡ್‌ನಿಂದ ಸಾವನ್ನಪ್ಪಿದ್ದರು. ಅಂದಿನಿಂದ ಕುಟುಂಬವು ನೋವಿನಲ್ಲಿತ್ತು ಎಂದು ಮನೆಯ ನೆರೆಹೊರೆಯವರು ತಿಳಿಸಿದ್ದಾರೆ. ಮಹಿಳೆ ಕೂಡ ಕೆಲವು ದಿನಗಳಿಂದ ಅಸ್ವಸ್ಥಗೊಂಡು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!