ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ 75 ವರ್ಷದ ಬಳಿಕ ಮಹಾರುದ್ರಯಾಗ ಸೋಮವಾರ ಜರುಗಿತು.

ತೀರಾ ಜೀರ್ಣಾವಸ್ಥೆಯಲ್ಲಿರುವುದನ್ನು ಜೀರ್ಣೋದ್ಧಾರಗೊಳಿಸಲು ಪೂರ್ವ ಬಾವಿಯಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಇಲ್ಲಿನ ಆಡಳಿತ ಮಂಡಳಿ, ಯಾಗ ಸಮಿತಿ ಮತ್ತು ಬ್ರಹ್ಮಾವರ ವಲಯ ಬ್ರಾಹ್ಮಣ ಸಮಿತಿಯ 25 ನೇ ವರ್ಷದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದೇವಸ್ಥಾನದ ತಂತ್ರಿಗಳಾದ ಕೃಷ್ಣ ಸೋಮಯಾಜಿಯವರ ಪ್ರಧಾನ ಆಚಾರ್ಯತ್ವದಲ್ಲಿ ಮೇ 19 ರಿಂದ ಪ್ರತೀದಿನ 35 ಮಂದಿ ಋತ್ವಿಜರಿಂದ ನಾನಾ ಪಾರಾಯಣ ಹೋಮಗಳು ನಡೆಯಿತು.

ಸೋಮವಾರ ಪೂರ್ಣಾಹುತಿ ಬಳಿಕ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಜರುಗಿತು.

ದೇವಸ್ಥಾನದ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಭಟ್ , ಅರ್ಚಕರಾದ ಕೃಷ್ಣ ಭಟ್ ,ಶಿವರಾಮ್ ಭಟ್, ಅನಂತಪದ್ಮನಾಭ ಭಟ್, ಯಾಗ ಸಮಿತಿಯ ಸಮಿತಿಯ ಅಶೋಕ್ ಭಟ್, ಸಂಚಾಲಕ ಸೂರ್ಯನಾರಾಯಣ ಗಾಣಿಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Advertisement. Scroll to continue reading.

In this article:barkuru mahalingeshwara temple, brahmavara, Diksoochi news, diksoochi Tv, diksoochi udupi
Click to comment

































