ಬೆಂಗಳೂರು : ಕೊನೆಗೂ ತೀವ್ರ ಕುತೂಹಲ ಮೂಡಿಸಿದ್ದಂತ ಕಾಂಗ್ರೆಸ್ ವಿಧಾನ ಪರಿಷತ್ ಟಿಕೆಟ್ ಪಟ್ಟಿ ಹೊರ ಬಿದ್ದಿದೆ. ಕಾಂಗ್ರೆಸ್ ನಿಂದ ವಿಧಾನ ಪರಿಷತ್ ನ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಎಐಸಿಸಿಯ ಚುನಾವಣಾ ಕಾರ್ಯದರ್ಶಿ ಪಟ್ಟಿ ಪ್ರಕಟಿಸಿದ್ದು, ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಹಾಗೂ ಕೆ.ಅಬ್ದುಲ್ ಜಬ್ಬರ್ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ.
ದಾವಣಗೆರೆ ಮೂಲದ ಅಬ್ದಲ್ ಜಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ
Advertisement. Scroll to continue reading.